ಬೆಂಗಳೂರು: ಸಿಎಂ ಸಿದ್ದರಾಮಯ್ಯ(Sidddaramaiah) ಅವರು ಕರಗ ಉತ್ಸವ (Bengaluru Karaga)ಕ್ಕೆ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಬೆಂಗಳೂರಿನಲ್ಲಿನ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿ ಸಿಎಂ ವಿಶೇಷ ಪೂಜೆ ಸಲ್ಲಿಸಿದರು. ಈ ಬಾರಿಯ ಕರಗ ಉತ್ಸವವು ಒಂದು ಗಂಟೆ ತಡವಾಗಿ ಆರಂಭವಾಗಲಿದ್ದು, ಮಧ್ಯರಾತ್ರಿ 1:30ಕ್ಕೆ ಕರಗ ಆರಂಭವಾಗಿದೆ. ಹೀಗಾಗಿ ಹಲವಾರು ಭಕ್ತರು ಮಧ್ಯರಾತ್ರಿಯವರೆಗೂ ನಿಂತು ಕರಗ ವೀಕ್ಷಿಸಿದರು.
ಆದರೆ, ಇಂದು ಕೂಡ ಬೆಂಗಳೂರಿಗೆ ಮಳೆಯ ಮುನ್ಸೂಚನೆ ಇದ್ದು, ಮಳೆಯ ಮಧ್ಯೆಯೂ ಕರಗ ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ. ಮಳೆ ಲೆಕ್ಕಿಸದೆ ತಯಾರಿ ಕೂಡ ಮಾಡಿಕೊಳ್ಳಲಾಗಿದೆ. ರಥ ಹಾಗೂ ದೇವಾಲಯವನ್ನು ನವವಧುವಿನಂತೆ ಸಿಂಗಾರಗೊಳಿಸಲಾಗಿದೆ.



















