ಶಿವಮೊಗ್ಗದಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸದಿರುವುದು ಸಚಿವ ಮಧು ಬಂಗಾರಪ್ಪ ಅವರ ಕೋಪಕ್ಕೆ ಕಾರಣವಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಸೇತುವೆ ಉದ್ಘಾಟನೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ. ಅದರ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ ಬಂದಿರುವುದರಿಂದ ರಾಜ್ಯದ ಸಿಎಂ ಅವರನ್ನು ಯಾಕೆ ಆಹ್ವಾನಿಸಬೇಕು ಅಂತ ಅಂದುಕೊಂಡಿದ್ದಾರೆ. ಸಿಎಂ ಅವರನ್ನೇ ಆಹ್ವಾನಿಸಿಲ್ಲ. ಇನ್ನು ನನ್ನನ್ನು ಆಹ್ವಾನಿಸಿಯಾರೇ ಎಂದು ಪ್ರಶ್ನಿಸಿ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.