ರಾಮನಗರ : ಕಾಂಗ್ರೆಸ್‌ನವರಿಗೆ ಮತ್ತೆ ಸರ್ಕಾರ ಬರಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಕಳೆದ ಎರಡು ವರ್ಷದಿಂದ ಪ್ರತಿದಿನ ಸಿಎಂ ಯಾರು ಎಂಬ ಜಗಳದಲ್ಲೇ ನಡೆಯುತ್ತಿದೆ. ಅಭಿವೃದ್ಧಿ ಎಂಬುವುದೇ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾತನಾಡಿದ ಆರ್.ಅಶೋಕ್, ಸರ್ಕಾರದ ಖಜಾನೆ ಖಾಲಿಯಾಗಿದೆ. ಗ್ರಾಜ್ಯುಯೇಷನ್ ಡೇ ಗೆ ವಿದ್ಯಾರ್ಥಿಗಳಿಗೆ ಮೆಡಲ್ ಕೊಡಲು ಸಹ ಹಣವಿಲ್ಲದಂತೆ ಆಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಪವರ್ ಪಾಲಿಟಿಕ್ಸ್‌ನಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಈಗಾಗಲೇ ಮೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಸರ್ಕಾರ ಇರುವರೆಗೂ ರಾಜ್ಯದ ಅಭಿವೃದ್ಧಿ ಆಗಲ್ಲ. ಇನ್ನೂ ನಾನಾ, ನೀನಾ ಎಂಬ ಜಗಳದಲ್ಲೇ ಇದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಗ್ಯಾರಂಟಿ ಯೋಜನೆ ಹೊರೆ ಎಂದು ಸಿದ್ದರಾಮಯ್ಯ ಈಗಾ ಒಪ್ಪಿಕೊಳ್ಳುತ್ತಾರೆ. ಗ್ಯಾರಂಟಿ ಯೋಜನೆ ಹೊರೆ ಅಂತಾ ಗೊತ್ತಿದ್ರು ಚುನಾವಣೆಯಲ್ಲಿ ಗೆಲ್ಲಲು ಮಾಡಿದ್ರಾ ಹಾಗಾದ್ರೆ. ಇವಾಗ ಕೊಡಿ ಇಲ್ಲವಾದರೇ ನಾವು ಬಿಡಲ್ಲ. ಮೊದಲು ಈ ಬಗ್ಗೆ ಜ್ಞಾನ ಇರಲಿಲ್ವಾ ಎಂದು ಸರ್ಕಾರ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ನಿರಂತರ ಮಳೆಗೆ ಕೆಸರು ಗದ್ದೆಯಂತಾದ ಶಿರಸಿ-ಹಾವೇರಿ ಹೆದ್ದಾರಿ | ರಸ್ತೆ ದುಸ್ಥಿತಿಗೆ ಜನ ಹೈರಾಣು



















