ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಇಬ್ಬರೂ ನಾಯಕರು ಏಪ್ರಿಲ್ ಮೊದಲ ವಾರ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ದೆಹಲಿಗೆ ಹೋಗುವ ಹಿನ್ನಲೆಯಲ್ಲಿ ಸಭೆ ನಡೆಸಿದ್ದಾರೆ. ಈ ಸಭೆ ಭಾರೀ ಮಹತ್ವ ಪಡೆದಿದೆ.
ಏಪ್ರಿಲ್ 2 ರಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ದೆಹಲಿಗೆ ತೆರಳಲಿದ್ದಾರೆ. ದೆಹಲಿ ಪ್ರವಾಸದಲ್ಲಿ ರಾಜ್ಯದಲ್ಲಿ ಖಾಲಿ ಇರುವ ವಿಧಾನ ಪರಿಷತ್ ಸ್ಥಾನದ ಭರ್ತಿ ಸಂಬಂಧ ಹೈಕಮಾಂಡ್ (High Command) ಜೊತೆ ಮಾತುಕತೆ ನಡೆಯಲಿದೆ.
ಸಿಎಂ ಡಿಸಿಎಂ ಹಾಗೂ ಗೃಹ ಸಚಿವ ಪರಮೇಶ್ವರ್ (Parameshwar) ಮಾತುಕತೆ ನಡೆಸಿದ್ದು, ರಾಜಣ್ಣ (Rajanna) ಹನಿಟ್ರ್ಯಾಪ್ ಹಾಗೂ ರಾಜೇಂದ್ರ (Rajendra) ಸುಪಾರಿ ಕಿಲ್ಲಿಂಗ್ ಬಗ್ಗೆ ಕೂಡ ಚರ್ಚೆ ನಡೆದಿದೆ ಎನ್ನಲಾಗಿದೆ.