ದಾವಣಗೆರೆ : ಸಿಎಂ – ಡಿಸಿಎಂ ಬ್ರೇಕ್‌ಫಾಸ್ಟ್ ಮಾಡಿ ಕುರ್ಚಿ ಸಂಘರ್ಷಕ್ಕೆ ಬ್ರೇಕ್ ಮಾಡಿದ್ದಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ವಚನಾನಂದ ಸ್ವಾಮೀಜಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಖುರ್ಚಿಗಾಗಿ ಆಂತರಿಕ ಸಂಘರ್ಷ ವಿಚಾರ ಮಾತನಾಡಿ ಸಿಎಂ – ಡಿಸಿಎಂ ಬ್ರೇಕ್‌ಫಾಸ್ಟ್ ಮಾಡಿ ಎಲ್ಲ ಬ್ರೇಕ್ ಮಾಡಿದ್ದಾರೆ. ಅವರು ಬಹಳ ಚೆನ್ನಾಗಿ ಪ್ರೀತಿಯಿಂದ ಇದ್ದಾರೆ. ಹೊಂದಿಕೊಂಡು ಹೋಗಿ, ಹೀಗೆ ಪ್ರೀತಿಯಿಂದ ಇರಿ ಅಂತಾ ಹೇಳುತ್ತೇವೆ. ಹೆಚ್ಚು ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ ಎಂದು ನಯವಾಗಿ ಚಾಟಿ ಬೀಸಿದ್ದಾರೆ.
ಜನರಿಗೆ ಒಳ್ಳೆಯ ರಸ್ತೆಗಳು, ಕುಡಿಯುವ ನೀರು ಬೇಕಾಗಿದೆ. ಈಗಾಗಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಲಕ್ಷ್ಮೇಶ್ವರಕ್ಕೆ ಹೋಗಿದ್ದೆ ಅಲ್ಲಿ ಸಾವಿರಾರು ರೈತರು ಬೀದಿಯಲ್ಲಿ ಕುಳಿತಿದ್ದಾರೆ. ಬೆಂಬಲ ಬೆಲೆ ನೀಡಿ ರೈತರು ಬೆಳೆದ ಮೆಕ್ಕೆಜೋಳ ಖರೀದಿಸಿ ಈಗಾಗಲೇ ರೈತರ ಹೋರಾಟ ನಡೆದಿದೆ, ಅದಕ್ಕೆ ನಾವು ಬೆಂಬಲ ಕೊಡುತ್ತೇವೆ. ನಮ್ಮ ಮಠಗಳು, ಪೀಠಗಳು ರೈತರ ಪರವಾಗಿ ಇರುತ್ತವೆ. ರೈತರು ಇಲ್ಲದೇ ನಮ್ಮ ದಾಸೋಹ ನಡೆಯಲ್ಲ ಎಂದಿದ್ದಾರೆ.
ಸಿಎಂ, ಡಿಸಿಎಂ ಪರ ಸ್ವಾಮೀಜಿಗಳ ಹೇಳಿಕೆ ವಿಚಾರ ಸಂಬಂಧಿಪಟ್ಟಂತೆ ಅವರವರ ದೃಷ್ಟಿಯಲ್ಲಿ ಅವರು ಸರಿಯಾಗಿಯೇ ಇದ್ದಾರೆ. ಅವರು ಸರಿ ಇವರು ಸರಿ ಅನ್ನೋಕೆ ನಾವು ಆ ಸ್ಥಾನದಲ್ಲಿ ಇಲ್ಲ. ಸಿಎಂ, ಡಿಸಿಎಂ ಹೇಗೆ ಬ್ರೇಕ್‌ಫಾಸ್ಟ್ ಮಾಡಿ ಒಂದಾಗಿದ್ದಾರೆ, ಹಾಗೇ ನಮ್ಮ ಸ್ವಾಮೀಜಿಗಳು ಒಂದಾಗಿದ್ದಾರೆ. ನಾವೆಲ್ಲ ಕೂಡಿರುತ್ತೇವೆ, ಕೂಡಿ ಪ್ರಸಾದ ಮಾಡಿರುತ್ತೇವೆ ಸ್ವಾಮೀಜಿಗಳ ಮಧ್ಯೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : 52ನೇ ಏಕದಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ.. ಆಫ್ರಿಕಾ ಬೌಲರ್ಗಳ ಬೆಂಡೆತ್ತಿದ ಕ್ರಿಕೆಟ್ ದೊರೆ



















