ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋ (Namma Metro) ಟಿಕೆಟ್ ದರ ಏರಿಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿರುವ ಅವರು, ಮೆಟ್ರೋ ದರ ಏರಿಕೆ ಮಾಡಿರುವುದು ರಾಜ್ಯ ಸರ್ಕಾರವಲ್ಲ ಎಂದು ಹೇಳಿದ್ದಾರೆ. ಮೆಟ್ರೋ ದರ ನಿಗದಿ ಮಾಡುವ ಕಮಿಟಿಯನ್ನು ಕೇಂದ್ರ ಸರ್ಕಾರ ನೇಮಕ ಮಾಡಿರುತ್ತದೆ. ಇಬ್ಬರು ಕೇಂದ್ರ ಸರ್ಕಾರದ ಪ್ರತಿನಿಧಿ, ಒಬ್ಬರು ರಾಜ್ಯ ಸರ್ಕಾರದವರು ಕಮಿಟಿಯಲ್ಲಿರುತ್ತಾರೆ. ಮೆಟ್ರೋ ಸ್ವಾಯತ್ತ ಸಂಸ್ಥೆ ಆದರೂ ಮೆಟ್ರೋವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ನಡೆಸುತ್ತವೆ. ಬೆಲೆ ನಿಗದಿ ಮಾಡಿ, ಏರಿಕೆ ಮಾಡಿ ಅಂತ ನಾವು ಪ್ರಪೋಸಲ್ ಕೊಡುತ್ತೇವೆ. ಆದರೆ ಬೆಲೆ ನಿಗದಿ ಮಾಡುವುದು ಕಮಿಟಿಯವರಿಗೆ ಬಿಟ್ಟಿರುತ್ತದೆ ಎಂದಿದ್ದಾರೆ.