ಸಿಎಂ ಬದಲಾವಣೆ ಚರ್ಚೆ ಈಗ ಅಪ್ರಸ್ತುತ. ಸಿಎಂ ಸಿದ್ದರಾಮಯ್ಯ ಅವರೇ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ ಎಂದು ಹೇಳಿದ್ದಾರೆ. ನಾನೇನು ಹೇಳಲು ಆಗುವುದಿಲ್ಲ. ಸಿಎಂ ಬದಲಾವಣೆಯ ಚರ್ಚೆ ಹೈಕಮಾಂಡ್ ಜೊತೆಗೆ ನಡೆದಿಲ್ಲ ಎಂದು ಸಿಎಂ ಮತ್ತು ಡಿಸಿಎಂ ಇಬ್ಬರೂ ಹೇಳಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಸಚಿವ ಮಹೇದೇವಪ್ಪ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೂಳಿ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಈಗಾಗಲೇ ಹೈಕಮಾಂಡ್ ಭೇಟಿ ಮಾಡಿದ್ದಾರೆ. ಆ ಕುರಿತು ನಾನು ಹೇಳಲು ಆಗುವುದಿಲ್ಲ. ಬದಲಾವಣೆ ಸೇರಿದಂತೆ ಯಾವುದೇ ವಿಷಯ ಇದ್ದರೂ ಅವರೇ ಮಾತನಾಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಶಾಸಕರ ಅಹವಾಲು ಆಲಿಸಿದ್ದಾರೆ. ಸಚಿವರನ್ನು ಯಾವುದೇ ವಿಚಾರದಲ್ಲಿ ಅವರು ಪ್ರಶ್ನಿಸಿಲ್ಲ ಎಂದಿದ್ದಾರೆ.


















