ಇತ್ತಿಚೆಗಂತೂ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ಬೈಕ್ ಕಳ್ಳತನ ಆಯ್ತು, ಒಡವೆ ಕಳ್ಳತನ ಆಯ್ತು ಇದೀಗ ಬಟ್ಟೆ ಕಳ್ಳ ನಗರಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಹುಚಿನ್ಸ್ ರಸ್ತೆ ಎರಡನೇ ಕ್ರಾಸ್ ನಲ್ಲಿ ಮನೆ ಮುಂದೆ ಒಣ ಹಾಕಿದ ಬಟ್ಟೆಯನ್ನೂ ಖತರ್ನಾಕ್ ಕಳ್ಳ ಎಸ್ಕೇಪ್ ಮಾಡಿದ್ದಾನೆ. ಮೇ 13 ರ ಮಧ್ಯಾಹ್ನ 1:33 ರ ಸುಮಾರಿಗೆ ಕಳ್ಳ ಕೃತ್ಯ ಎಸಗಿದ್ದು. ಬೈಕ್ ನಲ್ಲಿ ಬಂದು ಮನೆ ಎದುರು ಒಣಹಾಕಿದ ಬಟ್ಟೆಯನ್ನು ಕದ್ದೊಯ್ದಿದ್ದಾನೆ.
ಬೈಕ್ ನಂಬರ್ ಪ್ಲೇಟ್ ಅಳಿಸಿದ್ದು, ಬೈಕ್ ಮುಂದೆ ಸ್ಮೈಲಿ ಸ್ಟಿಕ್ಕರ್ ಅಂಟಿಸಿದ್ದಾನೆ. ಈತ ಒಣ ಹಾಕಿದ ಬ್ರ್ಯಾಂಡೆಡ್ ಬಟ್ಟೆಗಳನ್ನೇ ಆಯ್ದು ಕಳ್ಳತನ ಮಾಡುತ್ತಿದ್ದಾನೆ. ಇದೀಗ ಈತನ ವಿರುದ್ಧ ದೂರು ನೀಡಲಾಗಿದ್ದು, ಮಾಧುರಿ ಅದ್ನಾಲ್ ಎಂಬ ಖಾತೆಯಿಂದ ಪೊಲೀಸರಿಗೆ ಎಕ್ಸ್ ಖಾತೆಯಲ್ಲಿ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ.