ರಸ್ತೆ ಅಗಲಿಕರಣಕ್ಕೆ ಜಗಳೂರು ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿರುವ ಸರ್ಕಾರಿ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಆರರಂಭವಾಗಿದೆ.
ಪಟ್ಟಣ ಪಂಚಾಯತಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯ ಆರಂಭವಾಗಿದೆ. ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿ 65 ವಿಸ್ತೀರ್ಣೆ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿದೆ.
ರಸ್ತೆ ಪಕ್ಕದ ಕಟ್ಟಡಗಳ ತೆರವಿಗೆ ಹಲವು ದಿನಗಳಿಂದ ಜಗಳೂರು ರಸ್ತೆ ಅಗಲಿಕರಣ ಹೋರಾಟ ಸಮಿತಿ ಹೋರಾಟ ನಡೆಸಿತ್ತು. ಶಾಸಕ ದೇವೆಂದ್ರಪ್ಪ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ತೆರವು ಮಾಡುವ ಭರವಸೆ ನೀಡಿದ್ದರು.