ಶಿಕ್ಷಕನೊಬ್ಬ 2ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಮಗುವಿನ ಮೂಗು ಹಾಗೂ ಕಿವಿಯಲ್ಲಿ ರಕ್ತ ಸೋರಿರುವ ಘಟನೆ ನಡೆದಿದೆ.
2 ನೇ ತರಗತಿಯ ವಿದ್ಯಾರ್ಥಿನಿಗೆ ಶಿಕ್ಷಕ ಕಿವಿ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದ ಘಟನೆ ತೆಲಂಗಾಣದ ಜಗ್ತಿಯಾಲ್ ನಲ್ಲಿ ನಡೆದಿದೆ. ಶಿಕ್ಷಕನು ವಿದ್ಯಾರ್ಥಿನಿಗೆ ಬಲವಾಗಿ ಹೊಡೆದಿದ್ದರಿಂದಾಗಿ ಆಕೆಯ ಕಿವಿಯಿಂದ ಭಾರೀ ರಕ್ತಸ್ರಾವವಾಗಿದೆ. ಬಾಲಕಿ ತನ್ನ ಪುಸ್ತಕದಲ್ಲಿ ರಕ್ತವನ್ನು ತೋರಿಸುತ್ತಾ, ಅನುಭವಿಸಿದ ಸಂಕಟವನ್ನು ಹೇಳುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಟ್ಟಿಗರು ಘಟನೆ ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕನ ಅಮಾನುಷ ಕೃತ್ಯ ಮತ್ತು ಚಿಕ್ಕ ಮಗುವನ್ನು ಇಂತಹ ಭಯಾನಕ ಶಿಕ್ಷೆಗೆ ಒಳಪಡಿಸಿದ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಲ್ಲರೂ ಮನವಿ ಮಾಡುತ್ತಿದ್ದಾರೆ. ಈ ಘಟನೆ ವೈರಲ್ ಆಗುತ್ತಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಯಾವುದೇ ವರದಿಯಾಗಿಲ್ಲ.