ನಡುರಸ್ತೆಯಲ್ಲಿಯೇ ಬಿಎಂಟಿಸಿ- ಆಟೋ ಚಾಲಕರು ಪರಸ್ಪರ ಕೈ ಮೀಲಾಯಿಸಿಕೊಂಡಿರುವ ಘಟನೆ ಬ್ರಿಗೇಡ್ ರೋಡ್ ಬಳಿ ನಡೆದಿದೆ.
ಬಸ್ ಚಲಾಯಿಸುತ್ತಿರುವಾಗಲೇ ಎದುರಿಗೆ ನಿಂತು ಬಸ್ ತಡೆಯಲು ಮುಂದಾದ ಆಟೋ ಚಾಲಕ ಆಟೋಗೆ ಬಸ್ ಟಚ್ ಆದರೂ ಬಿಎಂಟಿಸಿ ಚಾಲಕ ಬಸ್ ನಿಲ್ಲಿಸದೆ ತೆರಳಿದ್ದಾನೆ ಎಂದು ಆರೋಪಿಸಿದ್ದಾರೆ.
ಆಟೋಗೆ ತಾಗಿಸಿಕೊಂಡು ಹೋಗಿರುವುದಕ್ಕೆ ಸಿಟ್ಟಾದ ಆಟೋ ಚಾಲಕ, ಚಲಾಯಿಸುತ್ತಿದ್ದ ಬಸ್ ಅಡ್ಡ ಬಂದು ತಡೆಯಲು ಮುಂದಾಗಿದ್ದಾನೆ. ಬಸ್ ಚಾಲಕ ಕೂಡ ಕೆರಳಿ ಬಸ್ ನಿಂದ ಇಳಿದು ಬಂದು ಆಟೋ ಚಾಲಕನ ನಡುವೆ ವಾಗ್ವಾದಕ್ಕೆ ಇಳಿದಿದ್ದಾನೆ. ವಾಗ್ವಾದ ಪರಸ್ಪರ ಕೈ ಮಿಲಾಯಿಸಿಕೊಳ್ಳುವವರೆಗೂ ಹೋಗಿದೆ ಎಂದು ತಿಳಿದು ಬಂದಿದೆ. ಸದ್ಯ, ಪ್ರಕರಣ ದಾಖಲಾಗಿದೆ.



















