ರಾಮನಗರ: ನಡುರಸ್ತೆಯಲ್ಲಿ ಪೊಲೀಸರೇ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ರಾಮನಗರದ ಐಜೂರು ವೃತ್ತದಲ್ಲಿ ಈ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರಾಮನಗರ ಪುರ ಠಾಣೆಯ ಮಹಿಳಾ ಪೇದೆ ರುಕ್ಮಿಣಿ ಪಾಟೀಲ್ ಹಾಗೂ ಸಂಚಾರ ಠಾಣೆ ಪೇದೆ ಮೋಹನ್ ಕುಮಾರ್ ಮಧ್ಯೆ ವಾಗ್ವಾದ ನಡೆದಿದೆ.
ರಾಂಗ್ ರೂಟ್ ನಲ್ಲಿ ಬಂದ ಮಹಿಳಾ ಪೇದೆ ರುಕ್ಮಿಣಿಗೆ ಸಂಚಾರಿ ಠಾಣೆ ಪಿಸಿ ಮೋಹನ್ ಕುಮಾರ್ ಪ್ರಶ್ನೆ ಮಾಡಿದ್ದರು. ಈ ವಿಚಾರವಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆನಂತರ ಸ್ಥಳೀಯರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದ್ದಾರೆ.



















