ಚೆನ್ನೈ: ಈ ವರ್ಷದ ಐಪಿಎಲ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಕೋಲ್ಕತ್ತಾ ತಂಡ ಹಾಗೂ ಹೈದರಾಬಾದ್ ತಂಡ ಫೈನಲ್ ಪ್ರವೇಶಿಸಿವೆ. ಈ ಮಧ್ಯೆ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಶುರುವಾಗಿವೆ.
ಫೈನಲ್ ಪಂದ್ಯವು ಚೆನ್ನೈನ (Chennai) ಚೆಪಾಕ್ ಮೈದಾನ (Chepauk Stadium) ದಲ್ಲಿ ನಡೆಯಲಿದೆ. ಐಪಿಎಲ್ 2024ರ (IPL 2024) ಲೀಗ್ ಹಂತದ ಅಗ್ರ ಎರಡು ತಂಡಗಳಾಗಿರುವ ಕೆಕೆಆರ್ ಹಾಗೂ ಹೈದರಾಬಾದ್ ಮತ್ತೊಮ್ಮೆ ರನ್ ಮಳೆ ಹರಿಸಲು ಸಜ್ಜಾಗಿವೆ. ಆದರೆ, ಚೆನ್ನೈನ ನಿಧಾನ ಗತಿಯ ಪಿಚ್ ಯಾರಿಗೆ ಲಾಭ ನೀಡುತ್ತದೆ ನೋಡಬೇಕಿದೆ.
ಫೈನಲ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಲಿದ್ದಾರೆ. ಫೈನಲ್ ಪ್ರವೇಶಿಸಿರುವ ಕೆಕೆಆರ್ ತಂಡ ಲೀಗ್ ಹಂತದ 14 ಪಂದ್ಯಗಳಲ್ಲಿ 9 ಪಂದ್ಯ ಗೆದ್ದು, 3 ಪಂದ್ಯದಲ್ಲಿ ಸೋಲು ಕಂಡಿತ್ತು. 2 ಪಂದ್ಯ ಮಳೆಗೆ ಬಲಿಯಾಗಿದೆ. ಒಟ್ಟು 20 ಅಂಕಗಳನ್ನು ಗಳಿಸಿ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಸ್‌ಆರ್‌ಹೆಚ್ ತಂಡ 14 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು, 5 ಪಂದ್ಯದಲ್ಲಿ ಸೋಲುಂಡಿದೆ. ಒಟ್ಟು 17 ಅಂಕಗಳನ್ನು ಗಳಿಸಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು.