ಅದೊಂದು ಕಾಲ ಇತ್ತು ಸಿನಿಮಾ ಮನೆಮಂದಿಯೆಲ್ಲಾ ಥಿಯೇಟರ್‌ಗೋಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ರಿಲೀಸ್ ಆದರೆ ಸಾಕು ಗಂಟೆಗಟ್ಟಲೆ ಕ್ಯೂ ನಿಂತು ಟಿಕೆಟ್ ಖರೀದಿ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾ ಥಿಯೇಟರ್ ಕಡೆ ಜನ ಮುಖ ನೋಡುತ್ತಿಲ್ಲ. ಹೀಗಾಗಿ ಚಿತ್ರಮಂದಿರಗಳು ಆದಾಯ ಕಡಿಮೆ ಮಾಡಿಕೊಳ್ಳುತ್ತಿವೆ. ಹೀಗಾಗಿ ಚಿತ್ರ ಮಂದಿರಗಳು ಬಂದ್ ಗೆ ಮುಂದಾಗಿವೆ.
ಮಲಯಾಳಂ ಸಿನಿಮಾ ಪ್ರದರ್ಶಕರು ಈಗಾಗಲೇ ಪ್ರತಿಭಟನೆ ಘೋಷಿಸಿದ್ದು ಶೀಘ್ರವೇ ಮಲಯಾಳಂ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಕೂಡ ಬಂದ್ ಆಗಲಿವೆ. ಭಾರತದಲ್ಲಿ ಅತಿ ಹೆಚ್ಚು ಲಾಭದಾಯಕ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ. ತೆಲುಗಿನಲ್ಲಿ ಸಿನಿಮಾ ರಿಲೀಸ್ ಆದ್ರೆ ಸಾಕು, ಪ್ರತಿ ಮನೆಗೂ ಒಬ್ಬರು ಮೂವಿಗೋಗಿ ಆ ಮೂವಿನಯನ್ನು ಸಕ್ಸಸ್ ಮಾಡಿಸ್ತಾ ಇದ್ರು.
ಆದರೆ ಇತ್ತೀಚೆಗೆ ಅಲ್ಲಿಯೂ ಸಹ ಸತತವಾಗಿ ಸಿನಿಮಾಗಳು ಸೋಲುತ್ತಿದ್ದು ಸಿನಿಮಾ ವಿತರಕರು, ಪ್ರದರ್ಶಕರು ನಷ್ಟ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈಸ್ಟ್ ಗೋಧಾವರಿ ಭಾಗದ ಸಿನಿಮಾ ಪ್ರದರ್ಶಕರು ಪ್ರತಿಭಟನೆಗೆ ಕರೆ ನೀಡಿದ್ದು, ಜೂನ್ 1 ರಿಂದ ಈಸ್ಟ್ ಗೋಧಾವರಿ ಭಾಗದ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಲಾಗಿದೆ.



















