ದೇಶದಲ್ಲೇ ಬಿಡುಗಡೆಗೂ ಮುನ್ನವೇ ಪುಷ್ಪ 2 ಚಿತ್ರ ಭಾರೀ ಹವಾ ಕ್ರಿಯೇಟ್ ಮಾಡಿದೆ. ಈಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘ಪುಷ್ಪ-ದ ರೂಲ್’ ಚಿತ್ರದಲ್ಲಿ ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈಗ ಈ ಚಿತ್ರ ಕೇವಲ ದಕ್ಷಿಣ ಭಾರತ ಮಾತ್ರವಲ್ಲ, ಇಡೀ ದೇಶದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ‘ಪುಷ್ಪ: ದ ರೈಸ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಶ್ರೀಲೀಲಾ ಸೇರಿದಂತೆ ಹಲವರು ನಟಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೇವಲ 24 ಗಂಟೆಗಳಲ್ಲಿ ಟ್ರೇಲರ್ ಕನ್ನಡದಲ್ಲಿ 22 ಲಕ್ಷ, ಬೆಂಗಾಲಿಯಲ್ಲಿ 9 ಲಕ್ಷ, ಮಲಯಾಳಂನಲ್ಲಿ 22 ಲಕ್ಷ, ತಮಿಳಿನಲ್ಲಿ 52 ಲಕ್ಷ, ತೆಲುಗಿನಲ್ಲಿ 4.5 ಕೋಟಿ ಹಾಗೂ ಹಿಂದಿಯಲ್ಲಿ 5 ಕೋಟಿ ವೀವ್ಸ್ ಪಡೆದುಕೊಂಡಿದೆ. ಅಂದರೆ ಎಲ್ಲ ಭಾಷೆಗಳಲ್ಲಿ ಒಟ್ಟಾರೆ 10 ಕೋಟಿಗೂ ಅಧಿಕ ಬಾರಿ ಇದು ವೀಕ್ಷಣೆಯಾಗಿದೆ. ಈ ಮೂಲಕ ಈ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ದಾಖಲೆ ಬರೆದಿದೆ.
ಬಿಹಾರದ ಪಟ್ನಾದಲ್ಲಿ ಚಿತ್ರದ ಟ್ರೇಲರ್ ಲಾಂಛ್ ಮಾಡಲಾಯಿತು. ಟ್ರೇಲರ್ ನಲ್ಲಿ ಅಲ್ಲು ಅರ್ಜುನ್ ಪುಷ್ಪರಾಜ್ ರೂಪದಲ್ಲಿ ಮಿಂಚಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ತುಂಬಾ ಪರಿಶ್ರಮ ಪಟ್ಟಿದ್ದೇವೆ. ಇಡೀ ದೇಶವೇ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದೆ. ನಿಮಗೆ ಸಿನಿಮಾ ಇಷ್ಟವಾಗುತ್ತದೆ’ ಎಂದು ಅರ್ಜುನ್ ಹೇಳಿದ್ದಾರೆ.