ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಿಂದಾಸ್ ಲೈಫ್ ಕಳೆಯುತ್ತಿದ್ದಾರೆ ಎಂಬುವುದಕ್ಕೆ ಸಾಕ್ಷಿಗಳು ಸಿಗುತ್ತಿವೆ.ಈ ಕುರಿತು ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿವೆ.
ಈ ಶಾಕಿಂಗ್ ವಿಚಾರ ಕೇಳಿ ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ. ಇಡೀ ರಾಜ್ಯವೇ ಈ ಸುದ್ದಿ ಕೇಳಿ ಶಾಕ್ ಗೆ ಒಳಗಾಗಿದೆ. ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಕಲ ಸೌಕರ್ಯಗಳು ಸಿಗುತ್ತಿವೆ ಎಂಬುವುದಕ್ಕೆ ಒಂದಿಷ್ಟು ಸಾಕ್ಷಿಗಳು ಸಿಗುತ್ತಿವೆ. ಸ್ಪೆಷಲ್ ಬ್ಯಾರಕ್ ನಲ್ಲಿ ಇರುವ ದರ್ಶನ್ ಅವರಿಗೆ ವಿಡಿಯೋ ಕಾಲ್ ಸೌಲಭ್ಯ ನೀಡಲಾಗಿದೆ ಎಂಬುವುದಕ್ಕೆ ಸಾಕ್ಷಿಗಳು ಸಿಕ್ಕಿವೆ.
ದರ್ಶನ್ ವ್ಯಕ್ತಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಚಿನ್ನಾ ‘ಊಟ ಆಯ್ತಾ? ನಾನು ಆರಾಮಾಗಿದ್ದೀನಿ’ ಎಂದು ಮಾತುಕತೆ ಮಾಡಲಾಗಿದೆ. ರೆಡ್ಡಿ ಎಂಬಾತನ ಸ್ಟೇಟಸ್ನಲ್ಲಿ ವಿಡಿಯೋ ಹರಿದಾಡಿದೆ. ಈ ವಿಡಿಯೋ ಕಾಲ್ ವೈರಲ್ ಆಗುವುದಕ್ಕೂ ಮುನ್ನ ಫೋಟೋ ವೊಂದು ವೈರಲ್ ಆಗಿತ್ತು. ಈ ಫೋಟೋದಲ್ಲಿ ಜೈಲಿನೊಳಗೆ ನಟೋರಿಯಸ್ ರೌಡಿಗಳ ಜೊತೆ ಹಾಯಾಗಿ ಕುಳಿತು ಮಾತುಕತೆ ನಡೆಸಿದ್ದಾರೆ. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನನೊಂದಿಗೆ ದರ್ಶನ್ ಕೈಯಲ್ಲಿ ಕಾಫಿ ಕಪ್ ಹಾಗೂ ಸಿಗರೇಟ್ ಹಿಡಿದು ಹರಟೆಯಲ್ಲಿ ಕುಳಿತಂತೆ ಕಂಡು ಬಂದಿದ್ದಾರೆ.
ಕೈದಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದ್ದವು. ಇದು ನಿಜ ಎಂಬ ಮಾತು ಈಗ ದರ್ಶನ್ ರ ಈ ವಿಡಿಯೋ ಹಾಗೂ ಫೋಟೋ ನೋಡಿ ಕೇಳಿ ಬರುತ್ತಿದೆ. ಕಾನೂನು ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಇಷ್ಟು ದಿನಗಳ ಕಾಲ ದರ್ಶನ್ ಅವರು ಕೊಲೆ ಕೇಸ್ನಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಕೆಲವರು ಹೇಳಿದ್ದರು. ಆದರೆ ಈಗ ವೈರಲ್ ಆದ ವಿಡಿಯೋ ಮತ್ತು ಫೋಟೋ ನೋಡಿದರೆ ಅವರಿಗೆ ಯಾವುದೇ ಪಶ್ಚಾತ್ತಾಪ ಕಾಡುತ್ತಿಲ್ಲ. ಆದರೆ, ಜೈಲು ಅಧಿಕಾರಿಗಳು ಮಾತ್ರ ಇಷ್ಟೊಂದು ಕಾನೂನು ಉಲ್ಲಂಘನೆ ಮಾಡುವುದು ಸರಿನಾ? ಎಂದು ಜನ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.