ರೌಡಿಶೀಟರ್ ಬಿಕ್ಲು ಆಲಿಯಾಸ್ ಶಿವಪ್ರಕಾಶ್ ಹತ್ಯೆ ಕೇಸ್ ನ ತನಿಖೆಯನ್ನು ಸಿಐಡಿ ತಂಡ ಚುರುಕುಗೊಳಿಸಿದೆ.
ಪ್ರಕರಣದ ಎ-1 ಆರೋಪಿ ಜಗ್ಗ ಆಲಿಯಾಸ್ ಜಗದೀಶನ ಬಂಧನಕ್ಕೆ ಬಲೆ ಬೀಸಲಾಗಿದೆ. ಸದ್ಯ ಜಗ್ಗ ದುಬೈನಲ್ಲಿ ತಲೆ ಮರೆಸಿಕೊಂಡಿದ್ದು, ಬ್ಲೂ ಕಾರ್ನರ್ ನೋಟಿಸ್ ನೀಡಿ ಜಗ್ಗನನ್ನ ಹೆಡೆಮುರಿ ಕಟ್ಟಲು ಸಿಐಡಿ ಟೀಂ ಸಜ್ಜಾಗಿದೆ.
ಸಿಬಿಐ ಮೂಲಕ ಬ್ಲೂ ಕಾರ್ನರ್ ನೋಟಿಸ್ ನೀಡಲು ಈಗಾಗ್ಲೇ ಟೀಂ ಸಜ್ಜಾಗಿದೆ. ಇನ್ನು ಬಿಕ್ಲು ಹತ್ಯೆ ಬಳಿಕ ಅಂದು ರಾತ್ರಿ ಆಡಿ ಕಾರಿನಲ್ಲಿ ಎಸ್ಕೇಪ್ ಆಗಿದ್ದ ಜಗ್ಗ ತಮಿಳುನಾಡಲ್ಲಿ ತಲೆಮರೆಸಿಕೊಂಡಿದ್ದ. ಬಳಿಕ ದುಬೈಗೆ ಹಾರಿ ಕರ್ನಾಟಕ ಮೂಲದ ಉದ್ಯಮಿಯೊಬ್ಬರ ಆಶ್ರಯದಲ್ಲಿ ದಿನ ದೂಡುತ್ತಿದ್ದಾನೆ ಎನ್ನಲಾಗಿದೆ. ಹೀಗಾಗಿ ಜಗ್ಗನನ್ನು ಕರೆ ತರಲು ಸಿಐಡಿ ಟೀಂ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಬಿಕ್ಲು ಮರ್ಡರ್ ಕೇಸ್ ನಲ್ಲಿ ಈಗಾಗ್ಲೇ ಪೊಲೀಸರು 16 ಜನ ಆರೋಪಿಗಳನ್ನ ಬಂಧಿಸಿದ್ದು, ಬಿಜೆಪಿ ಶಾಸಕ ಬೈರತಿ ಬಸವರಾಜ್ ನನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ರು. ಇದೀಗ ಪ್ರಕರಣದ ಎಲ್ಲಾ ದಾಖಲೆಯನ್ನ ಪೊಲೀಸರು ಸಿಐಡಿಗೆ ನೀಡಿದ್ದಾರೆ.