ಚಿತ್ರದುರ್ಗ : ಮದುವೆ ಮಾಡಿಲ್ಲ ಎಂದು ಹೆತ್ತ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಡ ಗ್ರಾಮದಲ್ಲಿ ನಡೆದಿದೆ.
ಸಣ್ಣ ನಿಂಗಪ್ಪ (60) ಮಗನಿಂದ ಕೊಲೆಯಾದ ತಂದೆ. ಲಿಂಗರಾಜ್ ಅಪ್ಪನನ್ನೇ ಕೊಂದ ಪಾಪಿ ಮಗ. ತಂದೆಯೊಂದಿಗೆ ಮದುವೆ ವಿಷಯಕ್ಕೆ ಜಗಳವಾಡಿದ ಲಿಂಗರಾಜ್, ತಂದೆ ಮದುವೆ ಮಾಡಲು ನಿರಾಕರಿಸಿದ್ದಕ್ಕೆ ತಲೆಗೆ ರಾಡ್‌ನಿಂದ ಹೊಡೆದು ಹತ್ಯೆಗೈದಿದ್ದಾನೆ.
ಸದ್ಯ ಸ್ಥಳಕ್ಕೆ ಹೊಸದುರ್ಗ ಪಿಐ ರಮೇಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಕೋಗಿಲು ಲೇಔಟ್ ಒತ್ತುವರಿ ತೆರವು ಪ್ರಕರಣ | ಇಬ್ಬರು ಆರೋಪಿಗಳ ಬಂಧನ



















