ಬೆಂಗಳೂರು: ನೀವೇನಾದರೂ ಚಿತ್ರದುರ್ಗ ಜಿಲ್ಲೆಯವರಾ? ನಿಮ್ಮ ಊರು ಅಥವಾ ಊರಿನ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಲು ಬಯಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಹೌದು, ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 9 ಹುದ್ದೆಗಳ ನೇಮಕಾತಿಗಾಗಿ (Chitradurga Gram Panchayat Recruitment 2026) ಅಧಿಸೂಚನೆ ಹೊರಡಿಸಲಾಗಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ವಿವರ ಇಲ್ಲಿದೆ.
ಹುದ್ದೆಗಳ ಕುರಿತು ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಜಿಲ್ಲಾ ಪಂಚಾಯಿತಿ, ಚಿತ್ರದುರ್ಗ
ಹುದ್ದೆಗಳ ಹೆಸರು: ಬಿಲ್ ಕಲೆಕ್ಟರ್
ಒಟ್ಟು ಹುದ್ದೆಗಳು: 9
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 8
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 18ರಿಂದ 35 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.50ರಷ್ಟು ಅಂಕ ಪಡೆದಿರುವುದು ಕಡ್ಡಾಯವಾಗಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಗಳು, ಕಂಪ್ಯೂಟರ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಒಬಿಸಿಯವರಿಗೆ 3 ವರ್ಷಗಳ ಸಡಿಲಿಕೆ ಇದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು chitradurga.nic.in ಗೆ ಭೇಟಿ ನೀಡಬಹುದಾಗಿದೆ.
ಯಾವ ಪಂಚಾಯಿತಿಯಲ್ಲಿ ಎಷ್ಟು ಹುದ್ದೆ?
ಮೈಲನಹಳ್ಳಿ 1
ಹಿರೇಹಳ್ಳಿ 1
ಸಿರಿಗೆರೆ 1
ಸಾಣಿಕೆರೆ 1
ತಂಡಗ 1
ಆರ್.ನುಲೇನೂರು 1
ದೊಡ್ಡೇರಿ 1
ಜಾಜೂರು 1
ಗನ್ನಾಯಕನಹಳ್ಳಿ 1
ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಸೆಕ್ರೆಟರಿ, ಮ್ಯಾನೇಜರ್ ಹುದ್ದೆಗಳ ನೇಮಕ | 2.06 ಲಕ್ಷ ರೂ. ಸಂಬಳ


















