ಚಿತ್ರದುರ್ಗ : ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಸೀಬರ್ಡ್ ಬಸ್ ದುರಂತದಲ್ಲಿ ಮೃತಪಟ್ಟ ಐವರ ಮೃತದೇಹದ ಗುರುತು ಡಿಎನ್‌ಎ ವರದಿಯಿಂದ ಪತ್ತೆಯಾಗಿದ್ದು, ಶವಗಳನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಡಿ.25ರಂದು ಬೆಂಗಳೂರಿನಿಂದ ಸೀಬರ್ಡ್ ಬಸ್‌ನಲ್ಲಿ ಗೋಕರ್ಣ ಶಿವಮೊಗ್ಗ ಹಾಗೂ ಕುಮಟಕ್ಕೆ ತೆರಳಲು ಒಟ್ಟು 32 ಜನ ಪ್ರಯಾಣಿಕರು ತೆರಳುತಿದ್ದರು. ಈ ಬಸ್‌ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊರ್ಲಡಕು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿಕ್ಕಿಯಾಗಿತ್ತು. ಪರಿಣಾಮ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು.
ಮೃತದೇಹ ಕರಕಲಾಗಿದ್ದು ಗುರುತು ಪತ್ತೆಯಾಗಿರಲಿಲ್ಲ. ಇದರಿಂದ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು, ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ಹಾಡಹಗಲೇ ಸಿನಿಮಾ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ | ಬೆಚ್ಚಿಬಿದ್ದ ಸ್ಥಳೀಯರು



















