ಚೀನಾ ದೇಶದಲ್ಲಿ ದೊಡ್ಡ ಸದ್ದು ಮಾಡಿರುವ HMP ವೈರಸ್ ಈಗ ಜಾಗತಿಕ ಮಟ್ಟದ ವೈರಸ್ ಆಗಿ ಬೆಳೆದು ನಿಂತಿದೆ. ಹೀಗಾಗಿ ಇಡೀ ವಿಶ್ವ ಮತ್ತೊಮ್ಮೆ ಆತಂಕದಲ್ಲಿ ಜೀವನ ಕಳೆಯುವಂತಾಗುತ್ತಿದೆ.
ಹೊಸ ರೂಪಾಂತರಿ HMP ವೈರಸ್ ಸಿಲಿಕಾನ್ ಸಿಟಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ ಅಗಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿ ಕೆಲ ಸೂಚನೆಗಳನ್ನು ನೀಡಿದೆ.
ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ಮನೆ ಮಾಡುತ್ತಿದೆ. ಕೊವೀಡ್ ನ್ನು ಹೊಸ ರೂಪಾಂತರಿ ವೈರಸ್ HMP ವೈರಸ್ ಈಗ ನಗರದ ಜನರ ನಿದ್ದೆಗೆಡಿಸಿದೆ. ಈಗಾಗಲೇ ನಗರದಲ್ಲಿನ ಇಬ್ಬರು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡುತ್ತಿದೆ.
ಹೀಗಾಗಿ ಮತ್ತೆ ಸೋಂಕು ಉಲ್ಭಣಗೊಳ್ಳಬಹುದು ಎಂಬ ಭಯದಲ್ಲಿ ಪೋಷಕರಿದ್ದಾರೆ. ಇಡೀ ವಿಶ್ವಕ್ಕೆ ದೊಡ್ಡ ಆತಂಕ ನೀಡಿದ್ದ ಕೊರೊನಾ ಕೊಂಚ ಸೈಲೆಂಟ್ ಆಗಿದೆ ಎನ್ನುವ ಸಂದರ್ಭದಲ್ಲೇ ಮತ್ತೊಂದು ಹೊಸ ರೂಪಾಂತರಿ ತಳಿ ರಾಜ್ಯದಲ್ಲಿ ಎಂಟ್ರಿ ಕೊಟ್ಟಿದೆ. ವಿದೇಶಗಳಲ್ಲಿ ಆರ್ಭಟಿಸಿದ್ದ ಈ ರೂಪಾಂತರಿಯನ್ನು, ಸಿಲಿಕಾನ್ ಸಿಟಿಯಲ್ಲಿ ಆರಂಭದಲ್ಲೇ ಮಕಾಡೆ ಮಲಗಿಸಲು ಅರೋಗ್ಯ ಇಲಾಖೆ ಪ್ಲಾನ್ ಮಾಡಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಹಾಗೂ 3 ತಿಂಗಳ ಹಸುಗೂಸಿನಲ್ಲಿ ಈ ವೈರಸ್ ಪತ್ತೆಯಾಗಿದ್ದು .ಆರೋಗ್ಯ ಇಲಾಖೆ ಅಧಿಕಾರಿಗಳು ತಜ್ಞರ ಅಭಿಪ್ರಾಯ ಪಡೆದು ಈ ರಾಕ್ಷಸ ತಳಿಗೆ ಆರಂಭದಲ್ಲೇ ಬ್ರೇಕ್ ಹಾಕಲು ಡಿಸೈಡ್ ಮಾಡಿದೆ. ಈ ನಿಟ್ಟಿನಲ್ಲಿ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವರು ಹಲವು ಸಲಹೆಗಳನ್ನು ಪಡೆದು ಸಾರ್ವಜನಿಕರಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಪತ್ತೆಯಾಗಿರೋ ಎರಡು ಪ್ರಕರಣಗಳಲ್ಲಿ ಈಗಾಗಲೇ ಮೂರು ತಿಂಗಳ ಮಗು ಗುಣಮುಖರಾಗಿ ಡಿಸ್ಸಾರ್ಜ್ ಅಗಿದ್ದು, 8 ತಿಂಗಳ ಮಗು ನಾಳೆ ಅಸ್ಪತ್ರೆಯಿಂದ ಡಿಸ್ಸಾರ್ಜ್ ಅಗಬಹುದು ಅಂತ ಅಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
8 ತಿಂಗಳ ಮಗುವಿನ ಕುಟುಂಬ ತಿರುಪತಿಗೆ ಹೋಗಿ ಬಂದಿದೆ. ಸದ್ಯ ಬೆಂಗಳೂರಿನ ಯಲಹಂಕ ನಿವಾಸಿಗಳೂ ಅಂತ ಮಾಹಿತಿ ನೀಡಿದರೆ. ವೈರಸ್ ಬಗ್ಗೆ ಮಾಹಿತಿ ನೀಡಿದ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರು ಇದು ಹಳೆಯ ವೈರಸ್. ಯಾವುದೇ ಆತಂಕ ಪಡಬೇಕಿಲ್ಲ. ಸದ್ಯ ರಕ್ತದ ಸ್ಯಾಂಪಲ್ ಪುಣೆಗೆ ಕಳುಹಿಸಲಾಗಿದೆ. ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ.
ಮುನ್ನೆಚ್ಚರಿಕಾ ಕ್ರಮ ಏನು ಮಾಡಬೇಕು…?
ಕರವಸ್ತ್ರ ಅಥವಾ ಮಾಸ್ಕ್ ನಿಂದ ಬಾಯಿಯನ್ನು ಮುಚ್ಚಿಕೊಳ್ಳಬೇಕು.
ಸ್ಯಾನಿಟೆಸರ್ ಬಳಕೆ
ಜನರ ಗುಂಪಿನಲ್ಲಿ ಸೇರಬಾರದು.
ಜನಸಂದಣಿ ಪ್ರದೇಶದಲ್ಲಿ ಎಚ್ಚರ ವಹಿಸಬೇಕು.
ಹೆಚ್ಚಿನ ಜನರ ಸಂಪರ್ಕಕ್ಕೆ ಬರದೇ ಮನೆಯಲ್ಲಿ ಇರಬೇಕು.
ಏನು ಮಾಡಬಾರದು ಅಂತ ನೋಡುವುದಾದರೆ…
ಬಳಸಿದ ಕರವಸ್ತ್ರವನ್ನೆ ಬಳಸಬಾರದು..
ಸದಾ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬಾರದು..
ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬಾರದು..
ಈ ವೈರಸ್ ಒದ್ದೋಡಿಸಲು ಜನರು ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.