ಮನುಷ್ಯನಿಗೂ ಚಿಂಪಾಂಜಿಗಳಿಗೂ ಸಣ್ಣ ಪ್ರಮಾಣದ ಹೋಲಿಕೆಯಿದೆ. ಮನುಷ್ಯ ಮಾಡುವ ಕೆಲವು ಕೆಲಸಗಳನ್ನು ಚಿಂಪಾಂಜಿಯೂ ಮಾಡುತ್ತದೆ. ಇದೀಗ ಮನುಷ್ಯನ ಚಟವನ್ನೂ ಚಿಂಪಾಂಜಿ ಕಲಿಯಲು ಹೊರಟಿದೆ. ಇಲ್ಲಿ ಚಿಂಪಾಂಜಿ ಮನುಷ್ಯರಂತೆ ಸಿಗರೇಟ್ ಸೇದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಚೀನಾದ ಮೃಗಾಲಯದಲ್ಲಿ ಈ ಘಟನೆ ನಡೆದಿದೆ ಎಂಬುದಾಗಿ ವರದಿಯಾಗಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಸಿಗರೇಟ್ ಸೇದುವುದು ಮನುಷ್ಯರಿಗಾಗಲಿ ಅಥವಾ ಪ್ರಾಣಿಗಳಿಗಾಗಲಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಿದ್ದರೂ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವಂತಹ ಚಟುವಟಿಕೆಗಳಿಗೆ ಹೇಗೆ ಅನುಮತಿ ನೀಡಿದರು ಎಂದು ಹಲವರು ಪ್ರಶ್ನಿಸಿದ್ದಾರೆ.
ಚೀನಾದ ಗುವಾಂಗ್ಸಿ ಪ್ರದೇಶದ ನಾನಿಂಗ್ ಮೃಗಾಲಯದಿಂದ ಈ ವಿಡಿಯೊವನ್ನು ಸೆರೆಹಿಡಿಯಲಾಗಿದೆ. ವಿಡಿಯೊದಲ್ಲಿ ಬಂಡೆಗಳ ಕೆಳಗೆ ಕುಳಿತಿರುವ ಚಿಂಪಾಂಜಿಯೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಧೂಮಪಾನ ಮಾಡುತ್ತಿದೆ. ಅದು ಮನುಷ್ಯರಂತೆ ಹೊಗೆಯನ್ನು ಉಗುಳುತ್ತಾ ಸಿಗರೇಟ್ ಸೇದುವುದನ್ನು ನೋಡಿದವರು ಆಶ್ಚರ್ಯಗೊಂಡಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಲ್ಲಿ ಚಿಂಪಾಂಜಿಗೆ ಸಿಗರೇಟ್ ಹೇಗೆ ಸಿಕ್ಕಿತು? ಅದನ್ನು ಯಾರು ನೀಡಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಿದೆ. ಮೃಗಾಲಯಕ್ಕೆ ಭೇಟಿ ನೀಡಿದವರಲ್ಲಿ ಯಾರೋ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ತಮ್ಮ ಸಿಗರೇಟ್ ಅನ್ನು ಪ್ರಾಣಿಗಳ ಆವರಣಕ್ಕೆ ಎಸೆದಿರಬಹುದು ಎಂದು ಹೇಳಲಾಗಿದೆ. ಈ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಚೀನಾ ಮೃಗಾಲಯದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಮೃಗಾಲಯದೊಳಗೆ ಚಿಂಪಾಂಜಿ ಧೂಮಪಾನ ಮಾಡುವ ವಿಡಿಯೊವನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ರಿಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ.
ಈ ಚಿಂಪಾಂಜಿ ಅಸಾಮಾನ್ಯ ನಡವಳಿಕೆಗಾಗಿ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಇದು ಸಂದರ್ಶಕರ ಮೇಲೆ ಕಲ್ಲು ಮತ್ತು ಮಣ್ಣನ್ನು ಎಸೆಯುವ ಮೂಲಕ ಸುದ್ದಿಯಾಗಿತ್ತು.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಚೀನಾದ ಮಹಿಳೆಯೊಬ್ಬರು ಶಾಂಘೈ ಮೃಗಾಲಯದಲ್ಲಿ ಕೆಲಸ ಮಾಡಲು ಬಯೋಫಾರ್ಮಾಸ್ಯುಟಿಕಲ್ ವ್ಯವಹಾರದಲ್ಲಿನ ಲಾಭದಾಯಕ ಹುದ್ದೆಯನ್ನು ತೊರೆದಿದ್ದಾರೆ. ಜಿಯಾಂಗ್ಸು ಪ್ರಾಂತ್ಯದ 25 ವರ್ಷದ ಮಹಿಳೆ ಮಾ ಯಾ ಪ್ರಕಾರ, ಆಕೆಗೆ ಸಿಕ್ಕ ಈ ಹೊಸ ಉದ್ಯೋಗ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿರುವಂತೆ ಮಾಡುತ್ತದೆ ಎಂದಿದ್ದಾರೆ. ಜತೆಗೆ, ಅನುಭವದ ದೃಷ್ಟಿಯಿಂದ ಪ್ರತಿಫಲದಾಯಕ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಈಕೆಗೆ ಮೊದಲಿನ ಕಂಪನಿಯಲ್ಲಿ ಸರಾಸರಿ ತಿಂಗಳ ಸಂಬಳವು ಸುಮಾರು 10,000 ಯುವಾನ್ (ಯುಎಸ್ $ 1,400 ಅಂದರೆ 1,22,452 ರೂಪಾಯಿ) ಸಿಗುತ್ತಿತ್ತು. ಆದರೆ ಆಕೆಗೆ ಮೃಗಾಲಯದಲ್ಲಿ ಕೆಲಸ ಮಾಡಲು ಅದರ ಅರ್ಧದಷ್ಟು ಸಂಬಳ ಸಿಗಲಿದೆ ಎನ್ನಲಾಗಿದೆ.