ಚಿಕ್ಕೋಡಿ: ಅರ್ಚಕರೊಬ್ಬರ ಬೈಕ್ ಗೆ ಸಂಘರ್ಷಕ್ಕೊಳಗಾದ (Minor) ಮಕ್ಕಳು ಬೆಂಕಿ ಹಚ್ಚಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ (Belagavi) ರಾಯಬಾಗ ತಾಲೂಕಿನ ಕುಡಚಿ (Kudachi) ಪಟ್ಟಣದಲ್ಲಿ ನಡೆದಿದೆ. ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಕುಡಚಿ ಪಟ್ಟಣದ ವಾರ್ಡ್ ನಂಬರ ಎರಡರ ಮರಾಠಾ ಗಲ್ಲಿಯಲ್ಲಿ ಶನಿವಾರ ರಾತ್ರಿ ಪಟ್ಟಣದ ಅರ್ಚಕ ಪ್ರವೀಣ್ ಕುಲಕರ್ಣಿ ಎಂಬುವವರಿಗೆ ಸೇರಿದ ಬೈಕಗೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಕ್ಕಳ ವಿಕೃತಿ ಮೆರೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.