ಚಿಕ್ಕಮಗಳೂರು: ಆಟವಾಡುತ್ತ ಮಕ್ಕಳು ಬಾವಿಗೆ ಬಿದ್ದ ಘಟನೆ ನಡೆದಿದೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ನಡೆದಿದೆ. ಸೀಮಾ(6), ರಾಧಿಕಾ (2) ಸಾವನ್ನಪ್ಪಿರುವ ದುರ್ದೈವ ಮಕ್ಕಳು.
ಸಾವನ್ನಪ್ಪಿರುವ ಮಕ್ಕಳ ಪೋಷಕರು ಮೂಲತಃ ಉತ್ತರ ಪ್ರದೇಶದವರು. ಇವರು ಕಾಫಿ ತೋಟದ ಕೆಲಸಕ್ಕೆಂದು ಬಂದಿದ್ದರು. ಮಂಗಳವಾರ ಎಂದಿನಂತೆ ಮನೆಯಲ್ಲೇ ಬಿಟ್ಟು ಪೋಷಕರು ಕಾಫಿ ತೋಟಕ್ಕೆ ಹೋಗಿದ್ದಾರೆ. ಆದರೆ, ಮರಳಿ ಬರುವಷ್ಟರಲ್ಲಿ ಮಕ್ಕಳು ಕಾಣಿಸಿರಲಿಲ್ಲ.
ನಂತರ ಮಕ್ಕಳನ್ನು ಹುಡುಕಾಡಿ ಸುಸ್ತಾದ ತಂದೆ -ತಾಯಿಗೆ ಬಾವಿಯಲ್ಲಿ ಶವವಾಗಿ ಮಕ್ಕಳು ಪತ್ತೆಯಾಗಿದ್ದಾರೆ. ಮನೆಯಲ್ಲಿದ್ದ ವೇಳೆ ಆಟವಾಡುತ್ತ ಬಾವಿಗೆ ಬಿದ್ದು ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.