ತುಮಕೂರು: ರಾಜ್ಯದಲ್ಲಿ ಮಕ್ಕಳ ಮಾರಾಟ ಜಾಲ(Child Sale) ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಗೃಹ ಸಚಿವರ ಜಿಲ್ಲೆಯಲ್ಲಿಯೇ ಜಾಲವೊಂದು ಪತ್ತೆಯಾಗಿದೆ. ಈ ಜಾಲವನ್ನು ತುಮಕೂರು ಪೊಲೀಸರು (Tumakuru Police) ಭೇದಿಸಿದ್ದಾರೆ.
ಅಲ್ಲದೇ, ಈ ವೇಳೆ 9 ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಗುಬ್ಬಿಯಲ್ಲಿ 11 ತಿಂಗಳ ಮಗು ಕಿಡ್ನಾಪ್ (Kidnap) ಪ್ರಕರಣದ ಬೆನ್ನತ್ತಿದ್ದ ಸಂದರ್ಭದಲ್ಲಿ ಈ ಜಾಲ ಪತ್ತೆಯಾಗಿದೆ. ಪ್ರಕರಣ ಸಂಬಂಧ 5 ಜನ ಮಕ್ಕಳನ್ನು ರಕ್ಷಿಸಿದ್ದಾರೆ. 1 ಮಗು ಸಾವನ್ನಪ್ಪಿದ್ದು, 3 ಮಕ್ಕಳಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಜಾಲ ಗರ್ಭ ಧರಿಸಿದ ಅವಿವಾಹಿತ ಮಹಿಳೆಯರು ಹಾಗೂ ಅನೈತಿಕ ಗರ್ಭ ಧರಿಸಿದವರಿಂದ ಮಕ್ಕಳನ್ನು ಖರೀದಿಸಿ ಮಾರಾಟ ಮಾಡುತ್ತಿತ್ತು ಎನ್ನಲಾಗಿದೆ.

ಹುಳಿಯಾರಲ್ಲಿ ಮೆಹಬೂಬ್ ಪಾಷಾ ಎಂಬಾತನ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳು ಕೊಳ್ಳುವವರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು ಅವರಿಗೆ ಮಗು ಹುಟ್ಟಿದೆ ಎಂದು ಸರ್ಟಿಫಿಕೇಟ್ ನೀಡಲಾಗುತ್ತಿತ್ತು. ಸದ್ಯ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಅಲ್ಲದೇ, ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.