ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹದ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಕೆಲ ಹಳ್ಳಿಗಳಲ್ಲಿ ಅಲ್ಲೊಂದು, ಇಲ್ಲೊಂದು ಪ್ರಕರಣಗಳು ಕೇಳಿ ಬರುತ್ತಿತ್ತು.ಆದರೆ ಇದೀಗ ರಾಜ್ಯ ರಾಜ್ಯಧಾನಿಯಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.

ಸೆ.26 ರಂದು, 16 ವರ್ಷದ ಅಪ್ರಾಪ್ತೆಯನ್ನು ಅನೆಪಾಳ್ಯ ಮಸೀದಿಯಲ್ಲಿ ಅಕ್ರಮವಾಗಿ ಮದುವೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹುಡುಗಿಯು ಗರ್ಭಿಣಿಯಾಗಿರುವ ಶಂಕೆಯೂ ಕೂಡ ದೂರಿನಲ್ಲಿ ಉಲ್ಲೇಖಗೊಂಡಿದ್ದು, ಅಪ್ರಾಪ್ತ ವಿವಾಹ ನಿಷೇಧ ಕಾಯ್ದೆಯು ವೈದ್ಯಕೀಯ ಪರೀಕ್ಷೆ ನಡೆಸಲು ತಿಳಿಸಿದೆ. 2006 ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ 2012ರ ಪಾಕ್ಸೊ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ದಾಖಲಾಗಿದೆ.
ಈ ಸಂಬಂಧ ಸುಜಾತ್ ಅಲಿ, ಹಸನ್ ರಝಾ, ಮಿರ್ ಕೈಂ, ಅಝಾನ್ ಜಾಫರಿ ಮತ್ತು ಇತರರ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.