ಬೆಳಗಾವಿ : ಬಸ್ ಹತ್ತುವ ವೇಳೆ ಮಗುವೊಂದು ಚಕ್ರದಡಿ ಸಿಲುಕಿದ ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸವದತ್ತಿಯಿಂದ ಬೆಳವಡಿ ಕಡೆ ಹೊರಟಿದ್ದ ಬಸ್‌ನಲ್ಲಿ ಓಡೋಡಿ ಬಂದು ಬಸ್ ಹತ್ತುವಾಗ ಮಹಿಳೆಯ ಕೈಯಲ್ಲಿದ್ದ ಮಗು ಮಿಸ್ ಆಗಿ ಜಾರಿ ಬಿದ್ದ ಪರಿಣಾಮ ಬಸ್ಸಿನ ಮುಂದಿನ ಚಕ್ರದಡಿ ಸಿಲುಕಿದೆ.
ಈ ವೇಳೆ ಚಾಲಕ ಗಮನಿಸದೆ ಏಕಾಏಕಿ ಬಸ್ಸು ಸಂಚರಿಸಿದ ಹಿನ್ನಲೆ ಮಗುವಿನ ಕಾಲಿನ ಮೇಲೆ ಬಸ್ ಹರಿದ ಪರಿಣಾಮ ಮಗುವಿನ ಕಾಲು ಸಂಪೂರ್ಣ ಜಖಂ ಆಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ‘ಕೇವಲ ಪ್ಲೇಆಫ್ ಸಾಲದು, ಈ ಬಾರಿ ನಮಗೆ ಕಪ್ ಬೇಕೇ ಬೇಕು’ – ಸಂಜೀವ್ ಗೋಯೆಂಕಾ ಗುಡುಗು!


















