ಬೆಂಗಳೂರು: ಆಟವಾಡುತ್ತಾ ಮೂರನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನಡೆದಿದೆ.
ಏಪ್ರಿಲ್ 6ರಂದು ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಗು ಕೆಳಗೆ ಬೀಳುವ ದೃಶ್ಯ ಕಂಡವರಿಗೆ ನಡುಕ ಮೂಡಿಸುವಂತಿದೆ. ಕೆಳಗೆ ಬಿದ್ದ ತಕ್ಷಣ ಮಗುವಿನ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದೆ. ಘಟನೆ ತಿಳಿದು ತಾಯಿ ತಕ್ಷಣ ಕೆಳಗೆ ಓಡಿ ಬಂದಿದ್ದು, ಮಗುವಿನ ಸ್ಥಿತಿ ನೋಡಿ ರಸ್ತೆ ಮಧ್ಯೆಯೇ ಮೂರ್ಛೆ ಹೋಗಿದ್ದಾರೆ. ಬಳಿಕ ಕುಟುಂಬದವರು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಸ್ತುತ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಮಗುವಿನ ಸ್ಥಿತಿ ಗಂಭೀರವಾಗಿರುವುದರಿಂದ ತಂದೆ-ತಾಯಿ ಆತಂಕದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ.
ಇದನ್ನೂ ಓದಿ : ಟಾಟಾ ಏಸ್-ಕಾರಿನ ನಡುವೆ ಭೀಕರ ಅಪಘಾತ.. ಮೂವರು ಗಂಭೀರ!


















