ಹಾವೇರಿ: ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ನೀರಿನ ಬಕೆಟ್‌ಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ಹಾವೇರಿಯ ಶಿವಬಸವ ನಗರದ ಮನೆಯೊಂದರಲ್ಲಿ ನಡೆದಿದೆ.
ದಕ್ಷಿತ್ ಯಳಂಬಲ್ಲಿಮಠ (1) ಬಕೆಟ್‌ಗೆ ಬಿದ್ದು ಮೃತಪಟ್ಟ ಮಗು. ಆಟವಾಡುತ್ತ ಬಕೆಟ್‌ಗೆ ತಲೆ ಕೆಳಗಾಗಿ ಬಿದ್ದು ಸಾವನ್ನಪ್ಪಿದೆ.
ಕಾಲು ಮೇಲಾಗಿ ಬಿದ್ದಿದ್ದ ಮಗುವನ್ನು ಕಂಡು ಗಾಬರಿಗೊಂಡಿದ್ದ ಹೆತ್ತವರು ಬಂದು ನೋಡುವಷ್ಡರಲ್ಲಿ ಮಗು ಪ್ರಜ್ಞೆ ತಪ್ಪಿತ್ತು. ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮಗು ದಕ್ಷಿತ್ ಮೃತಪಟ್ಟಿದೆ. ಈ ಸಂಬಂಧ ಹಾವೇರಿ ಶಹರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















