ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಿಭಾಗದಲ್ಲಿ ರೋಚಕ ಘಟನೆ ನಡೆದಿದೆ. ಬೇಟೆಗೆ ಹೊಂಚು ಹಾಕಿದ್ದ ಎರಡು ಚಿರತೆಗಳಿಗೆ ಕಾಡುಹಂದಿ ಚಳ್ಳೆಹಣ್ಣು ತಿನ್ನಿಸಿ ಕೊನೆಗೆ ಗುದ್ದಿ ಎಸ್ಕೇಪ್ ಆಗಿರುವ ಅಪರೂಪದ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಸಫಾರಿಗೆ ಬಂದಿದ್ದ ಪ್ರವಾಸಿಗರು ಈ ಕ್ಷಣಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಕಾಡುಹಂದಿಯನ್ನು ಸುತ್ತುವರಿದಿದ್ದ ಚಿರತೆಗಳ ಮೇಲೆ ಕಾಡುಹಂದಿಯೇ ಧೈರ್ಯವಾಗಿ ದಾಳಿ ಮಾಡಿ ಚಿರತೆಯಿಂದ ತಪ್ಪಿಸಿಕೊಂಡಿದೆ. ಕಾಡುಹಂದಿ ಓಡಿಹೋಗುತ್ತಿದ್ದಂತೆ ಮರದ ಮೇಲಿದ್ದ ಮತ್ತೊಂದು ಚಿರತೆ ಕೆಳಗಿಳಿದರೂ, ಬೇಟೆ ವಿಫಲವಾಗಿದೆ.
ಕೊನೆಯಲ್ಲಿ ಬೇಟೆಗೆ ಬಂದಿದ್ದ ಎರಡು ಚಿರತೆಗಳು ನಿರಾಸೆಯಲ್ಲೇ ಹಿಂತಿರುಗಿದವು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ : ಹಾಸನ | ಗ್ರಾಮ ಪಂಚಾಯತ್ ದಾಖಲೆ ಕೇಳಿದ್ದ ರೈತನ ಮೇಲೆ ಹಲ್ಲೆ



















