ಚಿಕ್ಕಬಳ್ಳಾಪುರ : ಪ್ರೀತಿಸಿ ಮದುವೆಯಾಗಿ ಪತ್ನಿಯನ್ನೇ ಗಂಡ ಕೊಲೆಗೈದಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಗ್ರಾಮದಲ್ಲಿ ನಡೆದಿದೆ.
ನವ್ಯಶ್ರೀ (19) ಮೃತ ನವವಿವಾಹಿತೆ. ಸತೀಶ್ ಕುಮಾರ್ ಪತ್ನಿಯನ್ನು ಕೊಲೆ ಮಾಡಿರುವ ದುರುಳ. ನವ್ಯಶ್ರೀ ಹಾಗೂ ಸತೀಶ್ ಕುಮಾರ್ ಕಳೆದ 8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪ್ರತಿನಿತ್ಯ ಕುಡಿದು ತಡವಾಗಿ ಮನೆಗೆ ಬರುತ್ತೀಯಾ ಎಂದು ನವ್ಯಶ್ರೀ ಜಗಳ ಆರಂಭಿಸಿದ್ದು, ಬಳಿಕ ಪತಿ ಸತೀಶ್ ಕುಡಿದ ಮತ್ತಿನಲ್ಲಿ ಪತ್ನಿಗೆ ರಾಡ್‌ನಿಂದ ಹೊಡೆದು ಹಲ್ಲೆಗೈದಿದ್ದಾನೆ.
ನವ್ಯಶ್ರೀಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾಳೆ. ಮೃತ ದೇಹವನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸತೀಶ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಬೀದರ್ | ಗಾಳಿಪಟ ಹಿಡಿಯಲು ಹೋಗಿ ಕಟ್ಟಡ ಮೇಲಿಂದ ಬಿದ್ದು ಯುವಕ ಸಾವು!



















