ಚಿಕ್ಕಬಳ್ಳಾಪುರ : ಮೋಜು ಮಸ್ತಿ ಮಾಡಲು ಪ್ರೇಮ ಪಕ್ಷಿಗಳು ಸ್ನೇಹಿತರಿಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಲಕ್ಷಾಂತರ ಹಣ ಕಬಳಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಮೂಲದ ಅನುಷಾ ಹಾಗೂ ಶಿಡ್ಲಘಟ್ಟ ಮೂಲದ ಅರುಣ್ ಮೋಸ ಮಾಡಿರುವ ಪ್ರೇಮಿಗಳು. ನನ್ನ ಬಾಯ್ ಫ್ರೆಂಡ್ ಖಾಸಗಿ ಸಂಸ್ಥೆಗೆ ಸಿಇಒ. ನಿಮಗೆಲ್ಲ ಕೆಲಸ ಕೊಡಿಸುತ್ತೇನೆ ಎಂದು ಸ್ನೇಹಿತರ ಬಳಿ ಪ್ರಿಯತಮೆ ಲಕ್ಷಾಂತರ ಹಣ ಪಡೆದಿದ್ದಾಳೆ. ಸುಮಾರು 5 ಲಕ್ಷ ಪಡೆದು ಹೈಪೈ ಜೀವನ ನಡೆಸುತ್ತಿದ್ದರು. ಇತ್ತ ಸ್ನೇಹಿತರಾದ ಪ್ರತಿಭಾ ಹಾಗೂ ಹರ್ಷಿತಾಳಿಗೆ ಕೆಲಸವು ಸಿಗದೇ ಹಣವು ಬಾರದೇ ಇದ್ದಿದ್ದರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತ ದೂರು ನೀಡಿದ್ದಕ್ಕಾಗಿ ಪ್ರಿಯತಮಾ ಮದುವೆ ನಿರಾಕರಿಸಿದ್ದಾನೆ. ದೂರಿನ ಬಳಿಕ ಅನುಷಾ ಒಂದು ವಾರ ಗಡುವು ತಗೆದುಕೊಂಡಿದ್ದಾಳೆ.
ಇದನ್ನೂ ಓದಿ : OnePlus 15R ಭಾರತದಲ್ಲಿ ಇಂದಿನಿಂದ ಮಾರಾಟಕ್ಕೆ ಲಭ್ಯ | ಖರೀದಿಸುವ ಮುನ್ನ ತಿಳಿಯಲೇಬೇಕಾದ 7 ಅಂಶಗಳು!



















