ಶಿವಮೊಗ್ಗ : ಕೋಳಿ ಅಂಗಡಿಗೆ ಸಿಡಿಲು ಬಡಿದ ಪರಿಣಾಮ ಕೋಳಿಗಳ ಜೊತೆ ಅಂಗಡಿ ಮಾಲೀಕನೂ ಸಹ ಮೃತಪಟ್ಟಿರುವ ಘಟನೆ ಶಿವಮೊಗ್ಗದ ರಾಮನಗರದಲ್ಲಿ ನಡೆದಿದೆ.
ಹಾರನಹಳ್ಳಿ ನಿವಾಸಿ ಮುಶೇಖ್ ಮುಜೀಬ್ ಉರ್ ರಹಮಾನ್ (45) ಮೃತ ವ್ಯಕ್ತಿ. ಶಿವಮೊಗ್ಗ ತಾಲೂಕು ಹಾರನಹಳ್ಳಿ ಸಮೀಪದ ರಾಮನಗರದಲ್ಲಿ ಸವಳಂಗ ರಸ್ತೆ ಪಕ್ಕದಲ್ಲಿ ರಹಮಾನ್ ಕೋಳಿ ಅಂಗಡಿ ನಡೆಸುತ್ತಿದ್ದರು.
ಸೋಮವಾರ ಸಂಜೆ ಮಳೆ ಗಾಳಿ ಜೊತೆಗೆ ಬಂದ ಸಿಡಿಲು ಮೊದಲು ಕೋಳಿ ಅಂಗಡಿ ಪಕ್ಕದ ಮರಕ್ಕೆ ಬಡಿದಿದೆ. ಸಿಡಿಲ ರಭಸಕ್ಕೆ ಮರದ ಜೊತೆಗೆ ಪಕ್ಕದ ಕೋಳಿ ಅಂಗಡಿಗೂ ಬಡಿದಿದೆ. ಇದರಿಂದ ಕೋಳಿ ಹಾಗೂ ಅಂಗಡಿಯಲ್ಲಿದ್ದ ಮಾಲೀಕ ರಹಮಾನ್ ಸಹ ಮೃತಪಟ್ಟಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಓಡಿ ಬಂದು ನೋಡುವಷ್ಟರಲ್ಲಿ ರಹಮಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಉಡುಪಿ ಅತೀ ಶೀಘ್ರದಲ್ಲೇ ಪೂರ್ಣ ಸಾಕ್ಷರ ಜಿಲ್ಲೆ – ಘೋಷಣೆಯೊಂದೇ ಬಾಕಿ


















