ಬೆಂಗಳೂರು: ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ (Chhava Movie Collection) ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 31 ಕೋಟಿ ರೂ. ಬಾಚಿಕೊಂಡು ಭರವಸೆ ಮೂಡಿಸಿದ್ದ ಸಿನಿಮಾ ಈಗ ಮೂರನೇ ದಿನವಾದ ಭಾನುವಾರದ ಸಂಜೆ ವೇಳೆಗೆ ಒಟ್ಟು 86.7 ಕೋಟಿ ರೂ. ಬಾಚಿಕೊಳ್ಳುವ ಮೂಲಕ ನೂರು ಕೋಟಿ ರೂ. ಗಳಿಕೆಯತ್ತ ಲಗ್ಗೆ ಇಡುತ್ತಿದೆ.
ಸಿನಿಮಾ ಬಿಡುಗಡೆಯಾದ ಶುಕ್ರವಾರ (ಫೆಬ್ರವರಿ 14) ಛಾವಾ ಸಿನಿಮಾ 31 ಕೋಟಿ ರೂ. ಬಾಚಿಕೊಂಡಿತು. ಶನಿವಾರ 37 ಕೋಟಿ ರೂ. ಗಳಿಕೆ ಮಾಡಿತು. ಭಾನುವಾರ ಸಂಜೆ ವೇಳೆಗೆ 18.7 ಕೋಟಿ ರೂ. ಗಳಿಸಿದ್ದು, ದಿನದ ಅಂತ್ಯದ ವರದಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಇದರೊಂದಿಗೆ ರಶ್ಮಿಕಾ ನಟನೆಯ ಮತ್ತೊಂದು ಸಿನಿಮಾ ಈಗ 100 ಕೋಟಿ ರೂ. ಕ್ಲಬ್ ಸೇರುವ ಎಲ್ಲ ಭರವಸೆಗಳನ್ನು ಮೂಡಿಸಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಜೀವನಾಧಾರಿತ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಸಂಭಾಜಿ ಪಾತ್ರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಪಾತ್ರವೂ ಮೆಚ್ಚುಗೆ ಗಳಿಸಿದೆ. ಕತೆ ಸಾಗುವ ರೀತಿ, ವಿಶ್ಯುವಲ್ ಎಫೆಕ್ಟ್ ಗಳಿಗೆ ಜನ ಫಿದಾ ಆಗಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಮತ್ತೊಂದು ಸಿನಿಮಾ ಕೂಡ ಹಿಟ್ ಆಗಿದೆ.