ಶಾಲಾ ಶಿಕ್ಷಣ ಇಲಾಖೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೈಂದೂರು ಹಾಗೂ ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಇವರ ಜಂಟಿ ಆಶ್ರಯದಲ್ಲಿ
ಬೈಂದೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ
ಚೆಸ್ ಪಂದ್ಯಾಟಕ್ಕೆ ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಮತ್ತು ಕಿರಿಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಶೇಖರ್ ಖಾರ್ವಿ ಮುಖಾ-ಮುಖಿ ಕೂತು ಚೆಸ್ ಆಟ ಆಡುದರ ಮೂಲಕ
ಚಾಲನೆ ನೀಡಿದರು.

ಸದ್ಯದ ಸಮಾಜದ ಆಗು-ಹೋಗುಗಳ ನಡುವೆ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿರ್ವಹಣೆಯು ಶಾಲಾ ಮಟ್ಟದಲ್ಲಿ ಪ್ರಮುಖವಾಗಿದೆ. ಈ ಹಂತದಲ್ಲಿ ಮಕ್ಕಳ ಚುರುಕುತನ ಮತ್ತು ಬುದ್ದಿ ಕೌಶಲ್ಯ ಹೆಚ್ಚಿಸುವ ಆಟವಾದ ಚದುರಂಗವು ಬಲು ಉಪಯುಕ್ತವಾದ ತಂತ್ರವಾಗಿದೆ. ಇಂತಹ ಆಟವನ್ನು ಹೆಚ್ಚು ಪ್ರೋತ್ಸಾಹಿಸಿ ಬೆಂಬಲಿಸುವ ನಿಟ್ಟಿನಲ್ಲಿ ವಲಯ ಮಟ್ಟದಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಲಯ ಮಟ್ಟದ ಬೇರೆ-ಬೇರೆ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಕಾರ್ಯಕ್ರಮಕ್ಕೆ ಕಳೆಕಟ್ಟಿದರು.

ಈ ವೇಳೆ ಗಮನ ಸೆಳೆದ ಬೈಂದೂರು ವಲಯ ದೈಹಿಕ ಶಿಕ್ಷಕರ ಸಂಘದವರು, ಶಿಕ್ಷಣ ಇಲಾಖೆಯ ಧೋರಣೆಯ ವಿರುದ್ಧ ಕಪ್ಪು ಪಟ್ಟಿ ಕೈಗೆ ಕಟ್ಟಿಕೊಂಡು ವೇದಿಕೆ ಏರಿ ಪ್ರತಿಭಟಿಸಿದರು. ಸದ್ಯ ವಿದ್ಯಾರ್ಥಿಗಳ ಕ್ರೀಡೆ ಸಂಬಂಧಿಸಿದಂತೆ ಪರಿಸ್ಥಿತಿ ಅರಿತು ಇಂದು ಬರಿಯ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ಪಾಲನೆ ಮಾಡುತ್ತಿದ್ದೇವೆ. ಇದರ ಮುಂದಿನ ಭಾಗವಾಗಿ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ವತಿಯಿಂದ ಆಗಸ್ಟ್ 29ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ನಡೆಸುತ್ತೇವೆ ಎಂದು ದೈಹಿಕ ಶಿಕ್ಷಕಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಒಕ್ಕೊರಲ ಧ್ವನಿಯಾದರು. ದೈಹಿಕ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಯಾವುದೇ ಮಟ್ಟದ ಹೋರಾಟಕ್ಕೂ ಸಿದ್ಧ ಎಂಬಂತೆ ಇಲಾಖೆಗೆ ಪ್ರತಿಭಟನೆಯ ಬಿಸಿಮುಟ್ಟಿಸಿದರು.