ಲಕ್ನೋ: ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕ ನಾಯಕ ಧೋನಿ (MS Dhoni) ನೇತೃತ್ವದಲ್ಲಿ ಜಯದ ಲಯಕ್ಕೆ ಮರಳಿದೆ.
ಧೋನಿ ಹಾಗೂ ಶಿವಂ ದುಬೆ (Shivam Dube) ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ರೋಚಕ 4 ವಿಕೆಟ್ ಗಳ ಜಯ ಕಂಡಿದೆ. ಮೊದಲು ಬ್ಯಾಟ್ ಮಾಡಿದ್ದ ಲಕ್ನೋ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ 5 ಎಸೆತ ಉಳಿಸಿ 5 ವಿಕೆಟ್ ಗಳ ಜಯ ಕಂಡಿತು.
ಚೆನ್ನೈ ಕಳೆದ 5 ಪಂದ್ಯಗಳಲ್ಲಿ ಸತತ ಸೋಲು ಕಂಡಿತ್ತು. ಈಗ ಅಭಿಮಾನಿಗಳು ಖುಷಿ ಪಡುವಂತೆ ಮಾಡಿದೆ. 6ನೇ ವಿಕೆಟಿಗೆ ಧೋನಿ ಮತ್ತು ದುಬೆ 28 ಎಸೆತಗಳಲ್ಲಿ 57 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಧೋನಿ ಅಜೇಯ 26 ರನ್, ಶಿವಂ ದುಬೆ 43 ರನ್, ರಚಿನ್ ರವೀಂದ್ರ, ಶೇಕ್ ರಶೀದ್ 52 ರನ್ ಗಳಿಸಿದರು.