ಬೆಂಗಳೂರು: ಮದ್ಯ ಪ್ರಿಯರಿಗೆ ಸರ್ಕಾರದಿಂದ ಮತ್ತೊಮ್ಮೆ ಶಾಕ್ ಎದುರಾಗಲಿದೆ.
ಬಜೆಟ್ ನಲ್ಲಿ (Karnataka Budget) ಪ್ರಕಟಿಸಿದಂತೆ ಜುಲೈ ಒಂದರಿಂದ ಮದ್ಯದ ಬೆಲೆಗಳಲ್ಲಿ (Liquor Price) ಏರಿಳಿತ ಆಗುವ ಸಾಧ್ಯತೆ ಇದೆ. ಅಗ್ಗದ ಬೆಲೆಯ ಮದ್ಯಗಳು ದುಬಾರಿಯಾದರೆ ದುಬಾರಿ ಮದ್ಯಗಳ ದರದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಆಗುವ ಸಾಧ್ಯತೆ ಇದೆ. ಆದರೆ, ಅಗ್ಗದ ಮದ್ಯದ ಬೆಲೆ ಹೆಚ್ಚಿಸುವ ಮೂಲಕ ಬಡ ಎಣ್ಣೆ ಪ್ರಿಯರ ಮೇಲೆ ಮತ್ತಷ್ಟು ಭಾರ ಬೀಳುವಂತಾಗಲಿದೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಈ ಕುರಿತು ಮಾತನಾಡಲು ವಿಪಕ್ಷಗಳಿಗೆ ನೈತಿಕತೆ ಇಲ್ಲ ಎಂದು ಅಬಕಾರಿ ಸಚಿವ (Excise Minister) ಆರ್.ಬಿ. ತಿಮ್ಮಾಪುರ (RB Thimmapur) ಕಿಡಿಕಾರಿದ್ದಾರೆ.