ಸ್ಯಾಂಡಲ್‌ವುಡ್‌ನ ಮೋಹಕತಾರೆ ನಟಿ ರಮ್ಯಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಮ್ಯಾ, ಸದ್ಯ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇದಕ್ಕಾಗಿ ಸಾಕಷ್ಟು ಒಳ್ಳೆಯ ಸ್ಕ್ರಿಪ್ಟ್ ಕೇಳಿರುವ ಅವರು, ಒಂದು ಐತಿಹಾಸಿಕ ಸಿನಿಮಾದ ಸ್ಕ್ರಿಪ್ಟ್ ಓಕೆ ಮಾಡಿದ್ದಾರೆ ಎಂಬ ಮಾತುಗಳು ಸುದ್ದಿಯಲ್ಲಿದೆ. ನಟಿ ರಮ್ಯಾ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ದಕ್ಷಿಣದ ಭಾರದಲ್ಲಿ ಖ್ಯಾತಿ ಪಡೆದಿದ್ದಾರೆ. ಜೊತೆಗೆ ಸಂಸದೆಯಾಗಿ ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ.
ನಟಿ ರಮ್ಯಾ 2021ರಲ್ಲಿ ತೆರೆಕಂಡ ನಾಗರಹಾವು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ, 2023ರಲ್ಲಿ ಬಿಡುಗಡೆಯಾದ ಹಾಸ್ಟೆಲ್ ಹುಡುಗರು ಸಿನಿಮಾ ಮೂಲಕ ಗೆಸ್ಟ್ ಅಪಿಯರೆನ್ಸ್ ಮೂಲಕ ಕಮ್‌ಬ್ಯಾಕ್ ಮಾಡಿದ್ದರು.
ಮಾಹಿತಿಗಳ ಪ್ರಕಾರ ನಟಿ ರಮ್ಯಾ ಅವರು ಸಿನಿಮಾ ನಿರ್ಮಾಣಕ್ಕೂ ಕೂಡಾ ತಯಾರಿಯನ್ನ ಮಾಡಿಕೊಂಡಿದ್ದಾರಂತೆ. ಅದರ ಜೊತೆ ಜೊತೆಗೆ ಸಿನಿಮಾದ ಸ್ಕ್ರಿಪ್ಟ್ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಟಿ ರಮ್ಯಾ ಅವರಿಗೆ ಕಥೆಯನ್ನ ರೆಡಿ ಮಾಡಿದ್ದೇನೆ ಎಂದು ಹೇಳಿದ್ದರು. ಅಲ್ಲದೇ ನಟಿ ರಮ್ಯಾ ಕೂಡಾ ಒಂದು ಕಥೆಯನ್ನ ಆಯ್ಕೆ ಮಾಡಿರುವುದಾಗಿ ಹೇಳಿಕೊಂಡಿದ್ದರು. ಸದ್ಯದಲ್ಲಿಯೇ ರಮ್ಯಾ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ.
ಇದನ್ನೂ ಓದಿ : ಈ ವಾರ ಘಟಾನುಘಟಿಗಳೇ ನಾಮಿನೇಟ್ | ಬಿಗ್‌ಬಾಸ್ ಮನೆಯಿಂದ ಯಾರಿಗೆ ಗೇಟ್‌ಪಾಸ್?



















