ಕಾರವಾರ: ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ. ಜಿಲೇಬಿ ತಿನ್ನೋರೆ ಬೇರೆ ಎಂದು ಬಿಜೆಪಿ ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ನೀಡಿರುವ ವಿಷಯವಾಗಿ ಮಾತನಾಡಿದ ಅವರು, ನನಗೆ ನೋಟಿಸ್ ತಲುಪಿದೆ. ಏನು ಪ್ರಶ್ನೆ ಕೇಳಿದ್ದಾರೆ, ಅದಕ್ಕೆ ಸೂಕ್ತ ಉತ್ತರ ನೀಡುವೆ. ನಾನೇನು ತಪ್ಪು ಮಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಏನೇ ಮಾಡಿದರೂ ಅದರದ್ದೇ ಆದ ಕಾರಣ ಇದೆ. ನಾವು ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿಲ್ಲ. ಪಕ್ಷದ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ನಮಗೆ ಆದ ಅನ್ಯಾಯದ ಬಗ್ಗೆ ಪತ್ರದಲ್ಲಿ ತಿಳಿಸಿದ್ದೇನೆ ಎಂದಿದ್ದಾರೆ.
ಯಾರು ಇದೆಕ್ಕೆಲ್ಲ ಪ್ರಚೋದನೆ ಕೊಟ್ಟರೋ, ಯಾರನ್ನು ಉಳಿಸಲು ಮಾತನಾಡಿದ ನಾಯಕರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಪಕ್ಷದ ಅಧ್ಯಕ್ಷ, ಮಹಾ ನಾಯಕರನ್ನು ವಾಚಾನುಗೋಚರವಾಗಿ ಬೈದರೋ ಅವರ ವಿರುದ್ಧ ಕ್ರಮ ಆಗಿಲ್ಲ ಎಂದಿದ್ದಾರೆ. ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ, ಜೈಲಿಗೆ ಹೋಗೋನೇ ಬೇರೆ ಎಂದು ಗುಡುಗಿದ್ದಾರೆ.