ಬೆಂಗಳೂರು : ಸುರ್ಜೆವಾಲಾ ನನ್ನನ್ನು ಸಭೆಗೆ ಕರೆದಿಲ್ಲ. ನನ್ನ ಕೈ ಬಿಡುತ್ತಾರೆ ಎಂದು ನನಗಂತೂ ಹೇಳಿಲ್ಲ. ನನಗಂತೂ ಸಭೆಗೆ ಕರೆದಿಲ್ಲ. ಉಳಿದವರ ಬಗ್ಗೆ ನನಗೆ ತಿಳಿದಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ. ತಿಮ್ಮಾಪುರ ಹೇಳಿದ್ದಾರೆ.
ಕೆಲವು ಮಂತ್ರಿಗಳನ್ನೂ ಬಿಟ್ಟಿದ್ದೀರಲ್ಲ ಯಾಕೆಂದು ಸುರ್ಜೆವಾಲಾರನ್ನು ಕೇಳಿ ಎಂದು ಹೇಳಿದ್ದಲ್ಲದೇ, ಹೈಕಮಾಂಡ್ ಕರೆದರೆ ಕೂಡಲೇ ಹೋಗುತ್ತದೆ. ಸುರ್ಜೇವಾಲರ ಮೇಲೆ ಇರುವ ಅಸಮಧಾನದ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ.
ಖರ್ಗೆ ದಲಿತ ಪಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವಾಗ ಏನು ನಿರ್ಧಾರ ಮಾಡಬೇಕು ಮಾಡುತ್ತೇವೆ. ಪಕ್ಷದ ಧ್ಯೇಯ ಧೋರಣೆ ನೋಡಿಕೊಂಡು ನಾವು ನಿರ್ಧಾರ ಮಾಡುತ್ತೇವೆ. ಸಿಎಂ ಆಯ್ಕೆ ಮಾಡುವಾಗಲೂ ನಮಗೊಂದು ಪದ್ದತಿ ಇದೆ. ಬಿಜೆಪಿಯವರನ್ನು ಕೇಳಿ ಪ್ರಧಾನಿ ಮಾಡುವುದಕ್ಕೆ ಆಗಲ್ಲ. ಬಿಜೆಪಿಯವರಿಗೆ ಎಂದಿಗೂ ಅಭಿವೃದ್ಧಿ, ದೇಶದ ರಕ಼್ಷಣೆ ವಿಚಾರ ಶಾಂತಿ ನೆಮ್ಮದಿ ಬೇಕಿಲ್ಲ. ಅದೆ ಅವರ ಅಜೆಂಡಾ ಎಂದಿದ್ದಾರೆ.



















