ನವದೆಹಲಿ: ಆಂಧ್ರಪ್ರದೇಶ (Andhra Pradesh) ನೂತನ ಸಿಎಂ ಆಗಿ ಜೂನ್ 12ರಂದು ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ-ಭಾರತೀಯ ಜನತಾ ಪಕ್ಷ-ಜನಸೇನಾ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ 74 ವರ್ಷದ ನಾಯ್ಡು ವಿಜಯವಾಡದ ರಾಜಭವನದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಔಪಚಾರಿಕವಾಗಿ ಹಕ್ಕು ಮಂಡಿಸಿದರು. ಪಕ್ಷದ ಮಿತ್ರಪಕ್ಷಗಳಾದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ದಗ್ಗುಬಾಟಿ ಪುರಂದೇಶ್ವರಿ ಈ ಸಂದರ್ಭದಲ್ಲಿ ಇದ್ದರು.
2014 ರಲ್ಲಿ ನಾಯ್ಡು ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿದ್ದರು. ಆದರೆ, 2019ರಲ್ಲಿ ಅವರು ಸೋಲು ಕಂಡಿದ್ದರು. ಈಗ ಮತ್ತೆ ಜಯ ಸಾಧಿಸಿ, ಆಂಧ್ರದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಜೂನ್ 12 ರಂದು ಬುಧವಾರ ಬೆಳಿಗ್ಗೆ 11.27 ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ.