ಬೆಂಗಳೂರು : ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ ಸಮಾರಂಭದಲ್ಲಿ ಕನ್ನಡಿಗರಿಗೆ ಅವಮಾನವಾಗಿತ್ತು. ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಸೈಮಾ ನಡೆಯ ಬಗ್ಗೆ ಕರಿ ಚಿರತೆ ದುನಿಯಾ ವಿಜಯ್ ಆಕ್ರೋಶ ಹೊರ ಹಾಕಿದ್ದರು.
ಈ ಘಟನೆ ನಡೆದ ಬೆನ್ನಲ್ಲೇ ಚಂದನವನಕ್ಕೆ ಸೈಮಾ ಪತ್ರ ಬರೆದಿದೆ. ಪತ್ರದಲ್ಲಿ ಸೈಮಾ ವ್ಯವಸ್ಥಾಪಕರು ತನ್ನ ಧೋರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ಸೈಮಾ ಪತ್ರದಲ್ಲಿ ಏನಿದೆ ?”
‘ನಮಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳು ಮುಖ್ಯ. ಮೊದಲಿನಿಂದಲೂ ಕನ್ನಡ ಭಾಷೆಯ ಚಿತ್ರರಂಗಕ್ಕೆ ಕೊಡಬೇಕಾದ ಗೌರವವನ್ನು ನೀಡುತ್ತಲೇ ಬಂದಿದ್ದೇವೆ. ವೇದಿಕೆಯಲ್ಲಿ ನಟ ದುನಿಯಾ ವಿಜಯ್ ಹಾಗೂ ನಿರೂಪಕರ ನಡುವಿನ ಮಾತುಗಳನ್ನೂ ನಾವು ಕಟ್ ಮಾಡಿಲ್ಲ’ ಎಂದು ಹೇಳಿದೆ.
ಆಗಿರುವ ಘಟನೆಗೆ ಸಂಬಂಧಿಸಿದಂತೆ ಸೈಮಾ ಕ್ಷಮೆ ಕೇಳದೆ, ತಾನೇ ಶ್ರೇಷ್ಟ ಎನ್ನುವ ರೀತಿಯಲ್ಲಿ ಸಮರ್ಥಿಸಿಕೊಂಡಿರುವುದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ.




















