ಚಾಮರಾಜಪೇಟೆಯ ಧರ್ಮ ದಂಗಲ್ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಹಸುವಿನ ಕೆಚ್ಚಲು ಕೊಯ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಚಾಮರಾಜಪೇಟೆ ಕ್ಷೇತ್ರದಲ್ಲಿ ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು ಚಾಮರಾಜಪೇಟೆ ನಾಗರಿಕ ಹಿತರಕ್ಷಣಾ ಒಕ್ಕೂಟ ನಿರ್ಧಾರ ಮಾಡಿದೆ.
ಹೀಗಾಗಿ ಮುಂದಿನ ವಾರ ಚಾಮರಾಜಪೇಟೆ ಬಂದ್ ಮಾಡಲು ನಿರ್ಧರಿಸಿದೆ. ಶನಿವಾರ ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಹೈ ವೋಲ್ಟೇಜ್(High voltage) ಮೀಟಿಂಗ್ ನಡೆಯುತ್ತಿದೆ. ಮೀಟಿಂಗ್ ನಲ್ಲಿ ಬಂದ್ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.
ಈಗಾಗಲೇ ಬಂದ್ ಗೆ ಹಿಂದೂ ಸಂಘಟನೆಗಳು, ಭಜರಂಗದಳ, ಹಿಂದೂ ವೇದಿಕೆಗಳು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಆರಂಭವಾಗುವ ಸಾಧ್ಯತೆ ಇದೆ.