ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲ್ ಎರಡನೇ ಆರೋಪಿಯಾಗಿರುವ ದರ್ಶನ್ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಡೆವಿಲ್ ಸಿನಿಮಾದ ಶೂಟಿಂಗ್ ಗಾಗಿ ಕೋರ್ಟ್ ಅನುಮತಿ ಪಡೆದು ವಿದೇಶಕ್ಕೆ ತೆರೆಳಿರುವ ದರ್ಶನ್ ಸದ್ಯ, ಥಾಯ್ಲೆಂಡ್ ನಲ್ಲಿದ್ದಾರೆ. ಸುಪ್ರೀಂಕೋರ್ಟ್ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿಕೆ ಮಾಡಿರುವುದರಿಂದ ನಿರ್ವಿಜ್ಞವಾಗಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.
ಆದರೆ, ಬಂಧನಕ್ಕೆ ಸೂಕ್ತ ಕಾರಣವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೀಗ ಆದೇಶಿಸಿರೋ ಕೋರ್ಟ್, 22ರಂದು ನಡೆಯುವ ವಿಚಾರಣೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತೆ ಅನ್ನೋದರ ಮೇಲೆ ದರ್ಶನ್ ಭವಿಷ್ಯ ಇತ್ಯರ್ಥವಾಗಲಿದೆ.



















