ಗದಗ: ಗುತ್ತಿಗೆಯಲ್ಲಿ ಮುಸ್ಲಿಂ ಮೀಸಲಾತಿ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯಂದ್ರ ಟ್ವೀಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಲ್ಲ ಹಿಂದುಳಿದ, ಅಲ್ಪ ಸಂಖ್ಯಾತರ ಬಗ್ಗೆ ಚಿಂತನೆ ಮಾಡುತ್ತೇವೆ. ಮುಸ್ಲಿಂರಾಗಿರಬಹುದು, ಕ್ರಿಶ್ಚಿಯನ್, ಸಿಖ್, ಬೌದ್ಧರು ಕೂಡ ನಮ್ಮ ದೇಶದ ಪ್ರಜೆಗಳು. ಸಮಬಾಳು ಸಮಪಾಲು ಅಂತಾ ಹೇಳುವ ನೀವು, ಅಲ್ಪಸಂಖ್ಯಾತರನ್ನು ಎಂಎಲ್ ಸಿ, ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ. ಇಬ್ಬರು ಕ್ರಿಶ್ಚಿಯನ್, ಮೂವರು ಮುಸ್ಲಿಂರನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ. ಆಗ ಸಮ ಬಾಳು, ಸಮಪಾಲು ಅಂತಾ ಮಾತಾಡುವುದಕ್ಕೆ ಒಂದು ಅರ್ಥ ಇರುತ್ತದೆ. ಅದು ಬಿಟ್ಟು ಸರ್ವರಿಗೂ ಸಮಪಾಲು ಅಂತಾ ನಿಮಗೆ ಹೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಕುವೆಂಪು ಅವರ ನಾಡಗೀತೆಯನ್ನು ಒಮ್ಮೆ ವಿಜಯೇಂದ್ರ ಓದಲಿ. ಈಗ ಪಾಪ ಅಧ್ಯಕ್ಷ ಆಗಿದ್ದಾರೆ. ಅವರ ಲೇವಲ್ ನಲ್ಲೇ ಇರಲಿ. ತಮ್ಮ ಲೆವೆಲ್ ಬಿಟ್ಟು ಮಾತನಾಡಲು ಬರಬಾರದು ಎಂದು ಕಿಡಿಕಾರಿದ್ದಾರೆ.