ಇತ್ತೀಚಿಗೆ ಚೈತ್ರಾ ಕುಂದಾಪುರ ಅವರು 12 ವರ್ಷದ ಗೆಳೆಯ ಶ್ರೀಕಾಂತ್ ಕಶ್ಯಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತುಂಬಾ ಸರಳವಾಗಿ ನಡೆದ ವಿವಾಹದಲ್ಲಿ ಕೇವಲ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ, ಮದುವೆಯಾದ ಕೆಲವೇ ದಿನಕ್ಕೆ ತಂದೆ- ಮಗಳ ಜಗಳ ಬೀದಿಗೆ ಬಂದಿತ್ತು ಎಂಬ ಆರೋಪವೊಂದು ಕೇಳಿ ಬಂದಿತ್ತು.
ಇದೀಗ ಚೈತ್ರಾ ಅವರ ವಿರುದ್ಧ ಮತ್ತೊಂದು ಸುಳ್ಳು ಸುದ್ದಿ ವೈರಲ್ ಆಗಿದ್ದು, ಗರಂ ಆಗಿದ್ದಾರೆ. ಸದಾ ಸುದ್ದಿಯಲ್ಲಿರುವ ಚೈತ್ರಾ ಕುಂದಾಪುರ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇದೀಗ ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿದವರಿಗೆ ಗರಂ ಆಗಿದ್ದಾರೆ. ಇತ್ತೀಚಿಗೆ “ಮದುವೆಯಾದ ಕೆಲವೇ ತಿಂಗಳಲ್ಲಿ ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ರೆಬೆಲ್ ಚೈತ್ರಾ ಕುಂದಾಪುರ, ಫಿದಾ ಆದ ಕರ್ನಾಟಕ” ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯೊಂದು ಸಕ್ಕತ್ ವೈರಲ್ ಆಗಿತ್ತು.
ಆ ವಿಚಾರವಾಗಿ ಚೈತ್ರಾ ಕುಂದಾಪುರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ“ಕ್ಲಿಕ್ ಬೈಟ್ ನ ಆಸೆಗೆ ಕಂಡವರ ಮನೆಯ ಖಾಸಗಿ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಇಂತಹ ಲೋ ಕ್ಲಾಸ್ ವೆಬ್ ನ್ಯೂಸ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಬರಬೇಕಿದೆ. ಇವರ ಲಾಲಸೆಗೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಹರಡಿಸುವ ಸುದ್ದಿಗಳು ನಮ್ಮ ಮತ್ತು ನಮ್ಮ ಕುಟುಂಬದವರ ಮೇಲೆ ಎಂತಹ ಪರಿಣಾಮ ಬೀರಬಹುದೇನ್ನುವ ಚಿಕ್ಕ ಕಲ್ಪನೆಯೂ ಇರಲಿಕ್ಕಿಲ್ಲ.
ಇತ್ತೀಚಿಗೆ ಇಂತಹ ಮುಖ ತೋರಿಸದೆ ಸುಳ್ಳು ಹಬ್ಬಿಸುವ ಯೂಟ್ಯೂಬ್ ಚಾನೆಲ್ ಗಳಿಗೆ ಕಡಿವಾಣ ಹಾಕಲು ಸ್ವತಃ ಯೂಟ್ಯೂಬ್ ಮುಂದಾಗಿತ್ತು. ವ್ಯವಸ್ಥೆ ಕೂಡ ಆ ದಿಕ್ಕಿನಲ್ಲಿ ಯೋಚಿಸಬೇಕಿದೆ” ಎಂದು ಚೈತ್ರಾ ಕಿಡಿಕಾರಿದ್ದಾರೆ.