ಬಿಗ್ ಬಾಸ್ ಕನ್ನಡ 12ನೇ ಸೀಸನ್ ಈಗ ಮತ್ತಷ್ಟು ರೋಚಕವಾಗಿದ್ದು, ಮನೆಯೊಳಗಿನ ವಾತಾವರಣ ದಿನದಿಂದ ದಿನಕ್ಕೆ ಗದ್ದಲದಿಂದ ತುಂಬುತ್ತಿದೆ. ಇತ್ತೀಚೆಗೆ ಬಿಗ್ ಬಾಸ್ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಮನೆ ಸದಸ್ಯರು ಒಗ್ಗಟ್ಟಾಗಿ ಗಿಲ್ಲಿ ನಟಗೆ ಮತ್ತೊಂದು ಕಳಪೆ ನೀಡಿ, ಅವರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಡುಗಡೆಯಾದ ಪ್ರೋಮೋದ ಪ್ರಕಾರ, ಅಶ್ವಿನಿ ಗೌಡ ಗಿಲ್ಲಿ ನಮ್ಮ ವಿಚಾರವನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ರಘು ಕೂಡ ಕಾಮಿಡಿ ಮತ್ತು ಪರ್ಸನಲ್ ಸ್ಪೇಸ್ ಗೆ ಒಂದು ಗಡ್ಡೆ ರೇಖೆ ಇದೆ, ಅದನ್ನು ಗಿಲ್ಲಿ ದಾಟುತ್ತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ. ಈ ಇಬ್ಬರೂ ಸೇರಿ ಗಿಲ್ಲಿಗೆ ಕಳಪೆ ಸಹ ನೀಡಿದ್ದಾರೆ.
ಇತ್ತ ಚೈತ್ರಾ ಕುಂದಾಪುರ ಅವರೊಂದಿಗೆ ಗಿಲ್ಲಿ ವರ್ತಿಸಿದ ರೀತಿ ಹೆಚ್ಚು ವಿವಾದಕ್ಕೆ ಕಾರಣವಾಗಿದೆ. ಗಿಲ್ಲಿಯ ವರ್ತನೆ ಬಗ್ಗೆ ಚೈತ್ರಾ ಅಸಹನೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮವನ್ನು ನನ್ನ ಕುಟುಂಬದವರು ನೋಡುತ್ತಾ ಇರುತ್ತಾರೆ. ಗಿಲ್ಲಿ ವಯಸ್ಸಿಗೆ ತಕ್ಕ ಗೌರವ ಕೊಡದೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಂದು ಬಾರಿ ಎಚ್ಚರಿಸಿದರೂ ಎರಡನೇ ಬಾರಿ ಹೇಳಿದ್ದೇನೆ, ಮೂರನೇ ಬಾರಿ ತಪ್ಪು ನಡೆದರೆ ನನ್ನ ಭಾಷೆಯಲ್ಲಿ ಹೇಳಬೇಕಾಗುತ್ತದೆ ಎಂದು ಗಟ್ಟಿ ಗಿಲ್ಲಿ ಹೇಳಿದ್ದಾರೆ. “ಅದಕ್ಕೆ ಯಾವ ಭಾಷೆಯಲ್ಲಿ ಹೇಳುತ್ತೀರೋ ನೋಡ್ತೀನಿ” ಎಂದರೆ, ಚೈತ್ರಾ “ನಿನಗೆ ಗೊತ್ತಿಲ್ಲ ಆದರೆ ಅರ್ಥ ಮಾಡಿಸ್ತೀನಿ” ಎಂದು ತೀರ ಕೋಪದಿಂದ ಪ್ರತಿಕ್ರಿಯಿಸುವುದು ಪ್ರೋಮೊದಲ್ಲಿ ಹೈಲಟ್ ಆಗಿದೆ. ಈ ಪ್ರೋಮೋ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.
ಇದನ್ನೂ ಓದಿ : ಬಿಗ್‌ಬಾಸ್ ಮನೆಯಲ್ಲಿ ಸದ್ದಿಲ್ಲದೇ ಶುರುವಾಯ್ತು ಲವ್‌ಸ್ಟೋರಿ? ರಕ್ಷಿತಾ ಶೆಟ್ಟಿಗೆ ಪೊಸೆಸಿವ್‌ನೆಸ್ ಕಾಡ್ತಾ ಇದೆಯಾ?



















