ಧಾರವಾಡ : ಕಳಸಾ ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನುಮತಿ ಕೊಡುವುದರಲ್ಲಿ ಅನ್ಯಾಯ ಮಾಡಿದೆ. ಮೀಟಿಂಗ್ ಕರೆಯುತ್ತಾರೆ ಕಳಸಾ ಬಂಡೂರಿ ವಿಚಾರ ಬಂದಾಗ ಮತ್ತೆ ಮುಂದೆ ಹಾಕುತ್ತಾರೆ. ಮೀಟಿಂಗ್ ಮುಂದೆ ಯಾಕೆ ಹಾಕುತ್ತಾರೆ. ಕಾರಣ ಏನೆಂಬುವುದು ತಿಳಿದಿಲ್ಲ. ನಮ್ಮ ಫಾರೆಸ್ಟ್ ಕ್ಲಿಯರೆನ್ಸ್ ಈಗಾಗಲೇ ನಿಮ್ಮ ಕಮಿಟಿ ಒಪ್ಪಿಕೊಂಡಿದೆ. ಆದರೆ ಕೇಂದ್ರ ಸರ್ಕಾರದವರು ಯಾಕೆ ಹೀಗೆ ಮಾಡುತ್ತಿಸದ್ದಾರೆನ್ನುವುದು ತಿಳಿಯುತ್ತಿಲ್ಲ ಎಂದು ಸಚಿವ ಹೆಚ್ ಕೆ ಪಾಟೀಲ್ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರೈತ ಹುತಾತ್ಮ ದಿನಾಚರಣೆ ಹಿನ್ನೆಲೆ ನವಲಗುಂದದಲ್ಲಿ ಹುತಾತ್ಮ ರೈತರಿಗೆ ನಮನ ಸಲ್ಲಿಸಿದ ಬಳಿಕ ಮಾದ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಸಚಿವ ಪಾಟೀಲ್, ಜಲ ವಿವಾದದ ಬಗ್ಗೆ ಗಮನ ಹರಿಸಿ ಎಂದು ಸಿಎಂ ನನಗೆ ತಿಳಿದ್ದಾರೆ. ಅನ್ಯಾಯ ಸರಿಪಡಿಸಬೇಕು ಎನ್ನುವ ಗಟ್ಟಿ ಧ್ವನಿಯನ್ನು ರಾಜ್ಯ ಸರ್ಕಾರ ಹೇಳುತ್ತಿದೆ. ಸಣ್ಣ ಪುಟ್ಟ ರಾಜಕಾರಣ ಮಾಡುವುದನ್ನು ಬಿಡಿ. ಕೇಂದ್ರ ಸರ್ಕಾರ ಈ ಕಾಮಗಾರಿ ಮಾಡಲು ಅವಕಾಶ ಮಾಡಿ ಕೊಡಿ ಎಂದ ಸಚಿವರು ಕೇಂದ್ರಕ್ಕೆ ಒತ್ತಾಯ ಮಾಡಿದ್ದಾರೆ.



















