ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ಏಮ್ಸ್(AIIMS)ನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ವೈದ್ಯಕೀಯ ಬೋಧನಾ ಸಂಸ್ಥೆಗಳಿಗೆ ತಮ್ಮ ಘಟಿಕೋತ್ಸವ ಸಮಾರಂಭಗಳಲ್ಲಿ ಧರಿಸುವ ವಸ್ತ್ರ ಸಂಹಿತೆ(Goodbye to black robes) ಬದಲಿಸುವಂತೆ ನಿರ್ದೇಶನ ನೀಡಿದೆ.
ಭಾರತೀಯ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಗುರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಸರ್ಕಾರ ಹಲವು ಮಹತ್ವದ ಘೋಷಣೆ ಮಾಡಿದೆ. ಆಗಸ್ಟ್ 23 ರ ಪತ್ರದಲ್ಲಿ ಸಚಿವಾಲಯವು ಘಟಿಕೋತ್ಸವದ ಸಮಯದಲ್ಲಿ ಕಪ್ಪು ನಿಲುವಂಗಿ ಮತ್ತು ಟೋಪಿಗಳನ್ನು ಧರಿಸುವ ಪ್ರಸ್ತುತ ಅಭ್ಯಾಸವು ಮಧ್ಯಯುಗದಲ್ಲಿ ಯುರೋಪಿನಿಂದ ಹುಟ್ಟಿಕೊಂಡಿದ್ದು, ಬ್ರಿಟಿಷ್ ವಸಾಹತು ಆಳ್ವಿಕೆಯಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಆದರೆ, ಸಂಸ್ಥೆಯು ನೆಲೆಗೊಂಡಿರುವ ರಾಜ್ಯದ ಸ್ಥಳೀಯ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಹೊಸ ಘಟಿಕೋತ್ಸವದ ಉಡುಪನ್ನು ವಿನ್ಯಾಸಗೊಳಿಸಲು ಸಚಿವಾಲಯವು ಸೂಚಿಸಿದೆ.
ಕಪ್ಪು ನಿಲುವಂಗಿ ಧರಿಸುವುದು ವಸಾಹತುಶಾಹಿ ಪರಂಪರೆಯಾಗಿದ್ದು ಅದನ್ನು ಬದಲಾಯಿಸಬೇಕಾಗಿದೆ. ಅದಕ್ಕೆ ಅನುಗುಣವಾಗಿ ವೈದ್ಯಕೀಯ ಶಿಕ್ಷಣವನ್ನು ನೀಡುವಲ್ಲಿ ತೊಡಗಿರುವ AIIMS / INIS ಸೇರಿದಂತೆ ಸಚಿವಾಲಯದ ವಿವಿಧ ಸಂಸ್ಥೆಗಳು ತಮ್ಮ ಸಂಸ್ಥೆಯ ಘಟಿಕೋತ್ಸವ ಸಮಾರಂಭಕ್ಕೆ ಸೂಕ್ತವಾದ ಭಾರತೀಯ ಡ್ರೆಸ್ ಕೋಡ್ ಅನ್ನು ವಿನ್ಯಾಸಗೊಳಿಸಲು ಸಚಿವಾಲಯವು ನಿರ್ಧರಿಸಿದೆ.