ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ತುಂಬಿದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾಲಸಿರಗುರ ಬಸ್ ನಿಲ್ದಾಣದ ಬಳಿ ನಡೆದಿದೆ.
ಬಿ.ಬಿ ಬಾವಿ ಸರ್ಕಾರಿ ಫ್ರೌಢ ಶಾಲೆ ಶಾಲೆಗೆ ಹೋರಟ್ಟಿದ್ದ, ಹಾಳ ಶಿರಗೂರ ಗ್ರಾಮದ ಅಮೀತ ಕಾಂಬಳೆ (11) 5ನೇ ತರಗತಿ ಓದುತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ದೈವಿ. ಅಂಜಲಿ ಕಾಂಬಳೆ 10 ನೇ ತರಗತಿ, ಅವಿನಾಶ ಕಾಂಬಳೆ 9 ತರಗತಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಗಾಯಾವಾಗಿದ್ದು, ವಿದ್ಯಾರ್ಥಿಗಳನ್ನು ಹಾರೂಗೇರಿ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಜಮಖಂಡಿ-ಕಾಗವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದಿಂದ ಸಮೀರವಾಡಿಗೆ ಹೊರಟ್ಟಿದ್ದ ಸಿಮೆಂಟ್ ತುಂಬಿದ ಕಂಟೆನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ ಪರಿಣಾಮ ಶಾಲೆಗೆ ಹೊರಟ್ಟಿದ್ದ ಮೂವರು ವಿದ್ಯಾರ್ಥಿಗಳು ಲಾರಿ ಕೆಳಗೆ ಸಿಲುಕಿ, ಈ ದುರ್ಘ ಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸದ್ಯ ಜೆಸಿಬಿ ಕ್ರೇನ್ ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳಕ್ಕೆ ಕುಡಚಿ ಪೊಲೀಸರು ಬೇಟಿ ನೀಡಿ, ಪರಿಶಿಲನೆ ನಡೆಸಿದ್ದಾರೆ. ಈ ಘಟನಾ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿನಿಮಾ ಸ್ಟೈಲ್‌ನಲ್ಲಿ ಬಸ್ ಒಳಗೆ ನುಗ್ಗಿ ಕಾಲೇಜು ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು



















